Home ಹಿರಿಯೂರು ಹಿರಿಯೂರು ಬಳಿ ಭೀಕರ ರಸ್ತೆ ಅಪಘಾತ: ಟೈರ್ ಸ್ಫೋಟಗೊಂಡು ಲಾರಿಗೆ ಕಾರು ಡಿಕ್ಕಿ, ಮೂವರು ಯುವಕರ ದುರ್ಮರಣ
ಹಿರಿಯೂರು

ಹಿರಿಯೂರು ಬಳಿ ಭೀಕರ ರಸ್ತೆ ಅಪಘಾತ: ಟೈರ್ ಸ್ಫೋಟಗೊಂಡು ಲಾರಿಗೆ ಕಾರು ಡಿಕ್ಕಿ, ಮೂವರು ಯುವಕರ ದುರ್ಮರಣ

Share
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್ ಹಳ್ಳಿ ಗೇಟ್ ಬಳಿ ಲಾರಿಯ ಟೈರ್ ಬರ್ಸ್ಟ್ ಆಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮೂಲದ ಮೂವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ.
Share

ಹಿರಿಯೂರು: ಲಾರಿಯ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಕಾರಿಗೆ ಗುದ್ದಿದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಭೀಕರ ಅಪಘಾತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್ ಹಳ್ಳಿ ಗೇಟ್ ಬಳಿ ಮಂಗಳವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಸಂಚರಿಸುತ್ತಿದ್ದ ವೇಳೆ ಟೈರ್ ಬರ್ಸ್ಟ್ ಆಗಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ದಿಢೀರ್ ಎಡಕ್ಕೆ ತಿರುಗಿದೆ. ಹಿಂಬದಿಯಲ್ಲೇ ಬರುತ್ತಿದ್ದ ಸ್ವಿಫ್ಟ್ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಕುಷ್ಟಗಿ ಮೂಲದ ಶಶಿಧರ್ (22) ಮತ್ತು ಮಂಜುನಾಥ್ (22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಬಸವರಾಜ್ (21) ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದಿದ್ದಾರೆ. ಇನ್ನಿಬ್ಬರು ಗಾಯಾಳುಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Author

Share

Loading News...

More News

Related Articles

ಚಿತ್ರದುರ್ಗದಲ್ಲಿ ಭೀಕರ ಬರ: ಹಿರಿಯೂರು, ಚಳ್ಳಕೆರೆ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ರೈತರ ಕಣ್ಣೀರು

ಚಿತ್ರದುರ್ಗ: ರಾಜ್ಯದಲ್ಲಿ ಜೂಜಾಟವಾಡುವ ಮುಂಗಾರು ಮಳೆ ಹಾಗೂ ಜಾಗತಿಕ ಎಲ್ ನಿನೋ ಹೊಡೆತಕ್ಕೆ ಸಿಲುಕಿ ಜನತೆ...

ಹಿರಿಯೂರಿನ ಸೂರಗೊಂಡಹಳ್ಳಿ, ತವಂದಿ ಕೆರೆಗಳಿಗೆ ಭದ್ರಾ ನೀರು: ಸಚಿವ ಚಲುವರಾಯಸ್ವಾಮಿ ಪರಿಶೀಲನೆ

ಚಿತ್ರದುರ್ಗ (ಸೆ.20): ಚಿತ್ರದುರ್ಗ ಜಿಲ್ಲೆಯ ರೈತರ ಬಹುದಿನಗಳ ಕನಸಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಭರದಿಂದ...

ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಬಿಡುಗಡೆ: ನದಿ ಪಾತ್ರದ ಜನರಿಗೆ ಹೈ ಅಲರ್ಟ್!

ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿವಿಲಾಸ ಸಾಗರ (ವಿ.ವಿ. ಸಾಗರ) ಜಲಾಶಯದಿಂದ ವೇದಾವತಿ ನದಿಗೆ ಸೆಪ್ಟೆಂಬರ್ 19ರಿಂದ...

ಸೆ.17 ರಿಂದ ವಿ.ವಿ.ಸಾಗರ ಬಲದಂಡೆ ನಾಲೆಗೆ ನೀರು ಬಿಡುಗಡೆ: ಕಾಲುವೆ, ಹಳ್ಳಗಳಿಗೆ ಇಳಿಯದಂತೆ ಮುನ್ನೆಚ್ಚರಿಕೆ

ಚಿತ್ರದುರ್ಗ ಸೆ.16: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರ (ವಿ.ವಿ.ಸಾಗರ) ಜಲಾಶಯದಿಂದ ಬಲದಂಡೆ ನಾಲೆಯ...