ಹೊಳಲ್ಕೆರೆ: ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಶಿ ಹುಲಿಕುಂಟೆ ಮಠ್ ಅವರ ಗೆಲುವಿಗೆ ಶ್ರಮಿಸಲು ಹೊಳಲ್ಕೆರೆ ಪಟ್ಟಣದಲ್ಲಿ ಸಭೆ ಕರೆಯಲಾಗಿದೆ.
ಅ.11ರ ಭಾನುವಾರ ಸಂಜೆ 4 ಗಂಟೆಗೆ ಪಟ್ಟಣದ ಕೆ.ಸಿ. ಪುರುಷೋತ್ತಮ್ ಅವರ ನಿವಾಸದ ಮೇಲಿರುವ ಸಭಾಂಗಣದಲ್ಲಿ ಈ ಸಭೆ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಬಿ.ಸೋಮಶೇಖರ್ ಸೇರಿ ಕಾಂಗ್ರೆಸ್ನ ಪ್ರಮುಖ ಮುಖಂಡರು ಆಗಮಿಸಲಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯು ಅಕ್ಟೋಬರ್ 23ರಂದು ನಡೆಯಲಿದ್ದು, ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಅವರು ಸ್ವತಃ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಿದ್ದಾರೆ.
ಸಭೆಗೆ ಪದವೀಧರರು, ಯುವಜನರು, ಮಹಿಳೆಯರು, ಶಿಕ್ಷಕರು, ಮಾಜಿ ಜಿ.ಪಂ, ತಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮಾಜಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕೆಂದು ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ. ಹನುಮಂತಪ್ಪ, ಭರಮಸಾಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಅಳಗವಾಡಿ, ನಗರ ಬ್ಲಾಕ್ ಅಧ್ಯಕ್ಷ ಮಜರ್ ಉಲ್ಲಾ ಖಾನ್ ಮನವಿ ಮಾಡಿದ್ದಾರೆ.
- Chitradurga News
- Chitradurga Politics
- H Anjaneya
- Holalkere Congress meeting
- Holalkere News
- Karnataka MLC elections
- MLC Election
- Shashi Hulikunte Math
- South East Graduates Constituency
- T Raghumurthy
- ಆಗ್ನೇಯ ಪದವೀಧರ ಕ್ಷೇತ್ರ
- ಕಾಂಗ್ರೆಸ್ ಸಭೆ
- ಚಿತ್ರದುರ್ಗ ಸುದ್ದಿ
- ಟಿ.ರಘುಮೂರ್ತಿ
- ವಿಧಾನ ಪರಿಷತ್ ಚುನಾವಣೆ
- ಶಶಿ ಹುಲಿಕುಂಟೆ ಮಠ್
- ಹೆಚ್. ಆಂಜನೇಯ
- ಹೊಳಲ್ಕೆರೆ