Home ಚಿತ್ರದುರ್ಗ ಚಿತ್ರದುರ್ಗದಲ್ಲಿ ಅಕ್ಟೋಬರ್ 19 ರಂದು ರಾಜ್ಯ ಮಟ್ಟದ ವಿಕಲಚೇತನರ ಬೃಹತ್ ಸಮಾವೇಶ: 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಕರೆ
ಚಿತ್ರದುರ್ಗ

ಚಿತ್ರದುರ್ಗದಲ್ಲಿ ಅಕ್ಟೋಬರ್ 19 ರಂದು ರಾಜ್ಯ ಮಟ್ಟದ ವಿಕಲಚೇತನರ ಬೃಹತ್ ಸಮಾವೇಶ: 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಕರೆ

Share
ಚಿತ್ರದುರ್ಗದ ಮುರುಘಾಮಠದಲ್ಲಿ ಅ.19ರಂದು ನಡೆಯಲಿರುವ ವಿಕಲಚೇತನರ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸಲು ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಕರೆ ನೀಡಿದ್ದಾರೆ.
Share

ಚಿತ್ರದುರ್ಗ: ವಿಕಲಚೇತನರ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ ವಿಕಲಚೇತನರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮುಂಬರುವ ಅಕ್ಟೋಬರ್ 19ರ ಸೋಮವಾರದಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಬೃಹತ್ ವಿಕಲಚೇತನರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಕಲಚೇತನರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಮಹಾಂತೇಶ್ ಬ್ರಹ್ಮ ತಿಳಿಸಿದ್ದಾರೆ.

ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಬೆಳಿಗ್ಗೆ 10:30ಕ್ಕೆ ಈ ಬೃಹತ್ ಕಾರ್ಯಕ್ರಮ ಜರುಗಲಿದ್ದು, ತಮ್ಮ ನೇತೃತ್ವದಲ್ಲಿ ಹಕ್ಕೊತ್ತಾಯಗಳ ‘1 ಲಕ್ಷ ಸಹಿ ಸಂಗ್ರಹ ಅಭಿಯಾನ’ಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 18 ಲಕ್ಷಕ್ಕೂ ಹೆಚ್ಚು ವಿಕಲಚೇತನರಿದ್ದರೂ ಸಹ ಸರ್ಕಾರವು ಕೇವಲ ಗ್ಯಾರಂಟಿ ಯೋಜನೆಗಳ ಕಡೆಗೆ ಗಮನಹರಿಸಿ, ವಿಕಲಚೇತನರ ಬದುಕಿಗೆ ಯಾವುದೇ ಭದ್ರತೆ ನೀಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಶ್ರೀ ಮಹಾಂತೇಶ್ ಬ್ರಹ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ನೀಡುತ್ತಿದ್ದರೆ, ವಿಕಲಚೇತನರಿಗೆ ಕೇವಲ 600 ರಿಂದ 800 ರೂಪಾಯಿ ಮಾಸಾಶನ ನೀಡಿ ತಾರತಮ್ಯ ಮಾಡಲಾಗುತ್ತಿದೆ. ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣವಿದ್ದರೂ, ವಿಕಲಚೇತನರಿಗೆ ಕೇವಲ 100 ಕಿಲೋಮೀಟರ್ ವ್ಯಾಪ್ತಿಯ ಮಿತಿ ಹೇರಿ ಅನ್ಯಾಯ ಮಾಡಲಾಗಿದೆ. ಅಲ್ಲದೆ ಅಂತರಜಾತಿ ವಿವಾಹಕ್ಕೆ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡುವ ಸರ್ಕಾರ, ವಿಕಲಚೇತನರ ವಿವಾಹಕ್ಕೆ ಕೇವಲ 50,000 ರೂಪಾಯಿ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ವಿಕಲಚೇತನರ ಮಾಸಿಕ ಪಿಂಚಣಿಯನ್ನು ಕನಿಷ್ಠ 6,000 ರೂಪಾಯಿಗಳಿಗೆ ಹೆಚ್ಚಿಸಬೇಕು, ರಾಜ್ಯಾದ್ಯಂತ ಸಂಪೂರ್ಣ ಉಚಿತ ಬಸ್ ಪಾಸ್ ಸೌಲಭ್ಯ ನೀಡಬೇಕು ಮತ್ತು ವಿಕಲಚೇತನರ ವಿವಾಹ ಪ್ರೋತ್ಸಾಹಧನವನ್ನು 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದರೊಂದಿಗೆ ಮಾಸಾಶನಕ್ಕೆ ವಿಧಿಸಿರುವ ಆದಾಯದ ಮಿತಿಯನ್ನು ತಕ್ಷಣವೇ ರದ್ದುಗೊಳಿಸುವುದು, ವಿಕಲಚೇತನರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದು, ಪ್ರತಿ ತಾಲೂಕಿನಲ್ಲಿ ‘ವಿಕಲಚೇತನರ ಭವನ’ ನಿರ್ಮಿಸುವುದು ಹಾಗೂ ಮಾಸಿಕ ಕುಂದುಕೊರತೆ ಸಭೆಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ ಸೇವೆ ಸಲ್ಲಿಸುತ್ತಿರುವ ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಮತ್ತು ಎಂ.ಆರ್.ಡಬ್ಲ್ಯೂ ನೌಕರರನ್ನು ಕಾಯಂಗೊಳಿಸಬೇಕು, ಖಾಲಿ ಇರುವ ರಾಜ್ಯ ಆಯುಕ್ತರ ಹುದ್ದೆಯನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಹೊರಗುತ್ತಿಗೆ ನೌಕರರಿಗೆ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಶ್ರೀ ಮಹಾಂತೇಶ್ ಬ್ರಹ್ಮ ಅವರು ಕಡಾಖಂಡಿತವಾಗಿ ಆಗ್ರಹಿಸಿದ್ದಾರೆ.

“ನಮ್ಮ ಹೋರಾಟ ಸರ್ಕಾರದ ವಿರುದ್ಧವಲ್ಲ, ನಮ್ಮ ಹಕ್ಕುಗಳ ಪರವಾಗಿ” ಎಂದು ಸ್ಪಷ್ಟಪಡಿಸಿರುವ ರಾಜ್ಯಾಧ್ಯಕ್ಷ ಶ್ರೀ ಮಹಾಂತೇಶ್ ಬ್ರಹ್ಮ ಅವರು, ರಾಜ್ಯದ ಮೂಲೆ ಮೂಲೆಗಳಿಂದ ವಿಕಲಚೇತನರು ಹಾಗೂ ಅವರ ಕುಟುಂಬದವರು ತಮ್ಮ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗಾಗಿ ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕಳಕಳಿಯ ವಿನಂತಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು 9739743485 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Share

Loading News...

More News

Related Articles

ದಂಡ ವಸೂಲಿ ನಮ್ಮ ಉದ್ದೇಶವಲ್ಲ, ಜೀವ ರಕ್ಷಣೆ ನಮ್ಮ ಗುರಿ: ಚಿತ್ರದುರ್ಗ ಎಸ್ಪಿ ಕುಶಲ್ ಚೌಕ್ಸೆ

ಕೃಪೆ: ಡೆಕ್ಕನ್ ಹೆರಾಲ್ಡ್ (DH) / ನೃಪತುಂಗ ಎಸ್. ಕೆ. ಚಿತ್ರದುರ್ಗ: "ಸಂಚಾರ ನಿಯಮಗಳ ಜಾರಿ...

ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವ: ಪತ್ರಿಕೋದ್ಯಮದ ದಿಗ್ಗಜರ ಹೆಜ್ಜೆಗುರುತು ಮೆಲುಕು ಹಾಕಿದ ಹಿರಿಯ ಪತ್ರಕರ್ತರು

ಚಿತ್ರದುರ್ಗ: ಫ.ಗು.ಹಳಕಟ್ಟಿಯವರು ಹಿರಿಯ ಪತ್ರಕರ್ತರು. ಹಿಂದಿನ ಕಾಲದಲ್ಲಿ ಪತ್ರಿಕೋದ್ಯಮ ನಡೆಸುವುದೇ ಕಷ್ಟದ ಕೆಲಸ. ಆದರೆ ಅವರು...

ಚಿತ್ರದುರ್ಗ: ಗಾಯತ್ರಿ ಜಲಾಶಯದಲ್ಲಿ ಅಕ್ರಮ ಮಣ್ಣು ಸಾಗಾಟ ಜಾಲದ ಮೇಲೆ ಪೊಲೀಸರ ಮಿಂಚಿನ ದಾಳಿ; 4 ಟಿಪ್ಪರ್, ಹಿಟಾಚಿ ವಾಹನಗಳು ಜಪ್ತಿ!

ಚಿತ್ರದುರ್ಗ (chitradurgalive.com): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಗಾಯತ್ರಿ ಜಲಾಶಯದ ವ್ಯಾಪ್ತಿಯಲ್ಲಿ ಸರ್ಕಾರದ ಅನುಮತಿಯಿಲ್ಲದೆ...

ಚಿತ್ರದುರ್ಗ ಮುರುಘಾಮಠ: ಬದುಕಿಗೆ ದಾರಿದೀಪ ವಚನ ಸಾಹಿತ್ಯ; ಆಸೆಗೆ ಕಡಿವಾಣ, ಯೋಗದಿಂದ ನೆಮ್ಮದಿ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದಲ್ಲಿ ನಡೆಯುತ್ತಿರುವ 'ಶರಣ ಸಂಸ್ಕೃತಿ ಉತ್ಸವ'ವು ಬದುಕಿನ ಮೌಲ್ಯಗಳು, ಯೋಗದ ಮಹತ್ವ ಮತ್ತು...