Home ಚಿತ್ರದುರ್ಗ “ಮತ ಕಸಿದುಕೊಳ್ಳುವುದು ಕೊಲೆ ಮಾಡಿದಂತೆ”: ಚಿತ್ರದುರ್ಗದಲ್ಲಿ ಚುನಾವಣಾ ಆಯೋಗ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ
ಚಿತ್ರದುರ್ಗ

“ಮತ ಕಸಿದುಕೊಳ್ಳುವುದು ಕೊಲೆ ಮಾಡಿದಂತೆ”: ಚಿತ್ರದುರ್ಗದಲ್ಲಿ ಚುನಾವಣಾ ಆಯೋಗ, ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

Share
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ. ಮತಗಳ್ಳತನದ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆಕ್ರೋಶ.
Share

 ಚಿತ್ರದುರ್ಗ: ದೇಶದಲ್ಲಿ ಅಕ್ರಮ ದಾರಿ ಮೂಲಕ ಗದ್ದುಗೆ ಏರಿದ ಬಿಜೆಪಿ, ಈಗ ಮತಗಳ್ಳತನದೊಂದಿಗೆ ಅಧಿಕಾರ ಉಳಿಸಿಕೊಳ್ಳಲು ಷಡ್ಯಂತರ ನಡೆಸುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮುಷ್ಕರದ ನೇತೃತ್ವ ವಹಿಸಿ ಮಾತನಾಡಿದರು. ದೆಹಲಿ ಸೇರಿ ದೇಶದ ವಿವಿಧೆಡೆ ಈಗಾಗಲೇ ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ವನಿ, ಹೋರಾಟಕ್ಕೆ ಬೆಂಬಲ ವ್ಯಕ್ತವಾಗಿದೆ. ಜನ ಚಳವಳಿ ಶಕ್ತಿಗೆ ಕೇಂದ್ರ ಬಿಜೆಪಿ ಬೆಚ್ಚಿದೆ ಎಂದರು.

ಪ್ರತಿ ವ್ಯಕ್ತಿಗೂ ಒಂದು ಮತ ಸಂವಿಧಾನ ಬದ್ಧ ಹಕ್ಕು. ಇಂತಹ ಹಕ್ಕನ್ನು ಕಸಿದುಕೊಳ್ಳಲು ಬಿಜೆಪಿ ಸರ್ಕಾರ, ಚುನಾವಣೆ ಆಯೋಗದ ಮೂಲಕ ಷಡ್ಯಂತರ ನಡೆಸುತ್ತಿದೆ. ಇದಕ್ಕೆ ಆಯೋಗದ ಮುಖ್ಯ ಅಧಿಕಾರಿ ಜ್ಞಾನೇಶ್ ಕುಮಾರ್ ಬೆಂಬಲ ನೀಡುತ್ತಿರುವುದು ಬಹಿರಂಗಗೊAಡಿದೆ ಎಂದು ದೂರಿದರು.

ಕೂಡಲೇ ದೇಶದ ಪ್ರಥಮ ಪ್ರಜೆ ರಾಷ್ಟçಪತಿ ಮಧ್ಯಪ್ರವೇಶಿಸಿ, ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿರುವ ಜ್ಞಾನೇಶ್ ಅವರನ್ನು ವಜಾಗೊಳಿಸಿ, ಜೈಲಿಗೆ ಹಾಕಬೇಕು. ಬಳಿಕ ಸುಪ್ರೀಂ ಕೋರ್ಟ್ ಕಣ್ಗಾವಲಲ್ಲಿ ಚುನಾವಣಾಧಿಕಾರಿ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಅಹಿಂದ ಮತಗಳ ಕಾಂಗ್ರೆಸ್ ಪಕ್ಷದ ಸಾಂಪ್ರಾದಾಯಿಕ ಮತಗಳೆಂಬ ಕಾರಣಕ್ಕೆ ಈ ವರ್ಗದ ಜನರ ಮತ ಹಕ್ಕು ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ. ಆದ್ದರಿಂದ ಬೂತ್ ಮಟ್ಟದಲ್ಲಿನ ಕಾರ್ಯಕರ್ತರು ಇದಕ್ಕೆ ಕಡಿವಾಣ ಹಾಕಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಮನೆ ಮನೆಗೆ ತೆರಳಿ ಅಗತ್ಯ ಮಾಹಿತಿ ನೀಡಿ ಮತಪಟ್ಟಿಗೆ ನೈಜ ಮತದಾರರನ್ನು ಸೇರಿಸುವ ಪ್ರಕ್ರಿಯೆ ನಡೆಸಬೇಕೆಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮತದಾರರ ಪಟ್ಟಿ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನೆಯ ದೃಶ್ಯ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಬಿ.ಟಿ. ಜಗದೀಶ್, ಎಂ.ಕೆ. ತಾಜ್‌ಪೀರ್ ಮತ್ತಿತರರು ಭಾಗವಹಿಸಿದ್ದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮತದಾರರ ಪಟ್ಟಿ ಅಕ್ರಮ ಮತ್ತು ಮತಗಳ್ಳತನ ವಿರೋಧಿಸಿ ಒನಕೆ ಓಬವ್ವ ವೃತ್ತದಲ್ಲಿ ನಡೆದ ಪ್ರತಿಭಟನೆಯ ದೃಶ್ಯ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಬಿ.ಟಿ. ಜಗದೀಶ್, ಎಂ.ಕೆ. ತಾಜ್‌ಪೀರ್ ಮತ್ತಿತರರು ಭಾಗವಹಿಸಿದ್ದರು.

ದೇಶದ ಎಲ್ಲೆಡೆ ಬಿಜೆಪಿ ವಿರೋಧಿ ಅಲೆ ಸೃಷ್ಟಿಯಾಗಿದೆ. ಮೋದಿ, ಶಾ ವಿರುದ್ಧ ಜನಾಕ್ರೋಶ ಇಮ್ಮಡಿಗೊಳ್ಳುತ್ತಿದೆ. ಇದರಿಂದ ಬೆಚ್ಚಿರುವ ಬಿಜೆಪಿ ಸರ್ಕಾರ, ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ, ಮತದಾನದ ಹಕ್ಕು ಅತ್ಯಂತ ಪಾವಿತ್ರö್ಯತೆ ಹೊಂದಿದೆ. ಇಂತಹದ್ದಕ್ಕೆ ಧಕ್ಕೆ ತರುವ ಕೆಲಸ ದೇಶದ್ರೋಹದ್ದಾಗಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಮಾತನಾಡಿ, ಮೋದಿ, ಶಾ ಸೂಚನೆ ಮೇರೆಗೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆಯೆಂಬ ಭಾವನೆ ಮೂಡುವ ರೀತಿ ಜ್ಞಾನೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಯನ್ನು ತಕ್ಷಣವೇ ಜೈಲಿಗೆ ಕಳುಹಿಸುವ ಕೆಲಸ ರಾಷ್ಟçಪತಿ ಮಾಡಬೇಕು ಎಂದರು.

ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ೧೮ ವರ್ಷದ ಯುವಪೀಳಿಗೆಗೆ ಮತಹಕ್ಕು ಕೊಡುವ ಕೆಲಸ ರಾಜೀವ್ ಗಾಂಧಿ ಮಾಡಿದ್ದರೇ, ಈಗಿನ ಬಿಜೆಪಿ ಸರ್ಕಾರ ಎಲ್ಲ ಜನರ ಮತದಾನದ ಅಧಿಕಾರವನ್ನೇ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಚುನಾವಣಾ ಆಯೋಗದ ನಡೆ ಅನುಮಾನ ಉಂಟುಮಾಡುವAತಿದೆ. ಆದ್ದರಿಂದ ಕೂಡಲೇ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ
ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಮುಖಂಡರಾದ ಗೀತಾನಂದಿನಿ ಗೌಡ, ಅಶೋಕ್ ನಾಯ್ಡು, ಆರ್.ಕೆ.ಸರ್ದಾರ್, ಕೆ.ಪಿ.ಸಂಪತ್‌ಕುಮಾರ್, ತಾಳಿಕಟ್ಟೆ ಗಂಗಾಧರ್, ಶಿವಮೂರ್ತಿ, ಸೈಯದ್ ಮೋಹಿದ್ದೀನ್, ಅರ್ಪಿತಾ, ಲಕ್ಷಿö್ಮÃಕಾಂತ್, ಮುನೀರ್, ಬಿ.ದುರ್ಗ ರಮೇಶ್, ಚೇತನ್ ಬೋರೇನಹಳ್ಳೀ, ಪ್ರಕಾಶ್, ಗೌಡ, ಎನ್.ಡಿ.ಕುಮಾರ್, ತಿಪ್ಪೇಸ್ವಾಮಿ ಇತರರಿದ್ದರು.

ಮತಹಕ್ಕು ಕಸಿದುಕೊಳ್ಳುವುದು ಕೊಲೆ ಮಾಡಿದಂತೆ ಅಹಿಂದ ಮತಗಳಿಗಷ್ಟೇ ಕನ್ನ
ಹಾಕುತ್ತಿರುವುದು ನೀಚಕೃತ್ಯ. ಈ ಹಿಂದೆ ಸಂಸದರು, ಶಾಸಕರನ್ನು ಖರೀದಿ ಮಾಡಿದವರು ಈಗ
ಮತದಾರರ ಹಕ್ಕನ್ನೇ ಕಳ್ಳತನ ಮಾಡುವ ದುಷ್ಕೃತ್ಯಕ್ಕೆ ಇಳಿದಿದ್ದಾರೆ.
ಜಿ.ಎಸ್.ಕುಮಾರಗೌಡ, ಮುಖಂಡ

Author

Share

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...