Home ಚಿತ್ರದುರ್ಗ ಕಾತ್ರಾಳು ಕೆರೆಯಿಂದ ಜಿನಿಗಿ ಹಳ್ಳಕ್ಕೆ ನೀರು: ತರಳಬಾಳು ಶ್ರೀಗಳಿಗೆ ರೈತರ ಮನವಿ
ಚಿತ್ರದುರ್ಗ

ಕಾತ್ರಾಳು ಕೆರೆಯಿಂದ ಜಿನಿಗಿ ಹಳ್ಳಕ್ಕೆ ನೀರು: ತರಳಬಾಳು ಶ್ರೀಗಳಿಗೆ ರೈತರ ಮನವಿ

Share
ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ರೈತರು ಜಿನಿಗಿ ಹಳ್ಳಕ್ಕೆ ಕಾತ್ರಾಳು ಕೆರೆಯಿಂದ ನೀರು ಹರಿಸುವಂತೆ ಸಿರಿಗೆರೆಯ ತರಳಬಾಳು ಶ್ರೀಗಳಲ್ಲಿ ಮನವಿ ಮಾಡಿದ್ದಾರೆ. ವಿವರ ಇಲ್ಲಿದೆ.
Share

ಸಿರಿಗೆರೆ: ಚಿತ್ರದುರ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಾತ್ರಾಳು ಕೆರೆಯಿಂದ ಹತ್ತಾರು ಗ್ರಾಮಗಳಿಗೆ ನೆರವಾಗುವ ಜಿನಿಗಿ ಹಳ್ಳಕ್ಕೆ ನೀರು ಹರಿಸಲು ನೆರವಾಗಬೇಕಾಗಿ ತುರುವನೂರು ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳ ರೈತರು ತರಳಬಾಳು ಪೀಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿಯವರಲ್ಲಿ ಮನವಿ ಮಾಡಿದರು.

ಹೌದು, ಸೋಮವಾರ ಮಠದ ಸದ್ಧರ್ಮ ನ್ಯಾಯಪೀಠಕ್ಕೆ ಆಗಮಿಸಿದ ನೂರಾರು ರೈತರು ಶ್ರೀಗಳನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಮಳೆಯ ಕೊರತೆಯಿಂದ ಬರಗಾಲ ತೀವ್ರವಾಗಿ ಕಾಡುತ್ತಿದ್ದು, ಆಶಾದಾಯಕವಾಗಿದ್ದ ಮೆಕ್ಕೆಜೋಳ ಹಾಗೂ ಮುಂಗಾರು ಪೈರುಗಳು ಸಂಪೂರ್ಣ ನಾಶವಾಗಿವೆ. ಕುಡಿಯುವ ನೀರಿನ ಬವಣೆ ಹಳ್ಳಿಗಳಲ್ಲಿ ವ್ಯಾಪಿಸುತ್ತಿದ್ದು, ಜಾನುವಾರುಗಳ ರಕ್ಷಣೆ ತೀರಾ ಕಷ್ಟವಾಗುತ್ತಿದೆ. ಆದ್ದರಿಂದ ಜಿನಿಗೆ ಹಳ್ಳಕ್ಕೆ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದರು.

ಇನ್ನು, ಭರಮಸಾಗರ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಕಾತ್ರಾಳು ಕೆರೆಯಲ್ಲಿ ಲಭ್ಯವಿರುವ ನೀರನ್ನು ಕೋಡಿಯ ಮೂಲಕ ಹರಿಸಿಕೊಡಿ ಎಂಬುದು ರೈತರ ಪ್ರಾರ್ಥನೆಯಾಗಿತ್ತು.

ಭದ್ರಾ ಮೇಲ್ಡಂಡೆಯ ನೀರು ನಮಗೆ ಆಧಾರ

ಮೂಲ ಯೋಜನೆಯಲ್ಲಿ ಕಾತ್ರಾಳು ಕೆರೆಗೆ ಭದ್ರಾ ಮೇಲ್ಡಂಡೆ ಯೋಜನೆಯ ನೀರು ಬರಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ತರಳಬಾಳು ಶ್ರೀಗಳು ದೃಷ್ಟಿ ಹಾಯಿಸಿದರೆ ಆ ಕೆಲಸವೂ ಸಹ ಬೇಗನೇ ಆಗಲಿದ್ದು, ಆದ್ದರಿಂದ ಭದ್ರಾ ಮೇಲ್ಡಂಡೆ ಯೋಜನೆಯ ನೀರನ್ನು ಕಾತ್ರಾಳು ಕೆರೆಗೆ ತರುವಂತೆ ಶ್ರೀಗಳಲ್ಲಿ ಅರಿಕೆ ಮಾಡಿಕೊಂಡಿದ್ದೇವೆ ಎಂದು ರೈತ ಮುಖಂಡ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ತಿಳಿಸಿದರು.
ರುಮ್ಮಾಗಟ್ಟೆ, ಪಾಪೇನಹಳ್ಳಿ, ವಡ್ಡನಹಳ್ಳಿ, ರಾಯನಹಳ್ಳಿ, ಸುಲ್ತಾನಿಪುರ, ಚಿಕ್ಕಪ್ಪನಹಳ್ಳಿ, ಸೂರನಹಳ್ಳಿ, ಮುದ್ದಾಪುರ, ಚಿಪ್ಪನಕೆರೆ, ಚಿಕ್ಕಗೊಂಡನಹಳ್ಳಿ, ಯಳಗೋಡು, ಮಾಡನಾಯಕನಹಳ್ಳಿ ಮುಂತಾದ ಗ್ರಾಮದ ರೈತರು ಶ್ರೀಗಳನ್ನು ಭೇಟಿ ಮಾಡಿದ್ದರು.

ಇನ್ನು ಈ ವೇಳೆ ರೈತ ಸಂಘದ ಪದಾಧಿಕಾರಿಗಳಾದ ಬಾಬು ರೆಡ್ಡಿ, ಬಸ್ತಿಹಳ್ಳಿ ಸುರೇಶ್‌ ಬಾಬು, ಆರ್.ಸಿ. ಅಜ್ಜಪ್ಪ, ಆರ್. ಬಸವರಾಜ್‌, ಟಿ. ತಿಪ್ಪೇಸ್ವಾಮಿ ಹಾಗೂ ನೂರಾರು ರೈತರು ಹಾಜರಿದ್ದರು.

Author

Share

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...