ಚಿತ್ರದುರ್ಗ (chitradurgalive.com): ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಚಿತ್ರದುರ್ಗ ಜಿಲ್ಲೆಯ ಒಟ್ಟು 37 ಜಿಲ್ಲಾ ಪಂಚಾಯಿತಿ ಸ್ಥಾನಗಳು ಹಾಗೂ ಜಿಲ್ಲೆಯ 6 ತಾಲ್ಲೂಕುಗಳ ಒಟ್ಟು 125 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮೀಸಲಾತಿ ವಿವರ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 37 ಸ್ಥಾನಗಳಿದ್ದು, ಇದರಲ್ಲಿ 19 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
| ಜಿಲ್ಲೆ | ಒಟ್ಟು ಸ್ಥಾನಗಳು (ಮಹಿಳೆ) | SC (ಮಹಿಳೆ) | ST (ಮಹಿಳೆ) | ಹಿಂ.ವರ್ಗ ‘ಅ’ (ಮಹಿಳೆ) | ಹಿಂ.ವರ್ಗ ‘ಬ’ (ಮಹಿಳೆ) | ಸಾಮಾನ್ಯ (ಮಹಿಳೆ) |
|---|---|---|---|---|---|---|
| ಚಿತ್ರದುರ್ಗ | 37 (19) | 9 (5) | 7 (4) | 2 (1) | 0 (0) | 19 (9) |
ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುವಾರು ಪಂಚಾಯಿತಿ ಮೀಸಲಾತಿ
ಜಿಲ್ಲೆಯ 6 ತಾಲ್ಲೂಕುಗಳ ಒಟ್ಟು 125 ಸ್ಥಾನಗಳ ಪೈಕಿ 65 ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಲಾಗಿದೆ.
| ತಾಲ್ಲೂಕು | ಒಟ್ಟು ಸ್ಥಾನಗಳು (ಮಹಿಳೆ) | SC (ಮಹಿಳೆ) | ST (ಮಹಿಳೆ) | ಹಿಂ.ವರ್ಗ ‘ಅ’ (ಮಹಿಳೆ) | ಹಿಂ.ವರ್ಗ ‘ಬ’ (ಮಹಿಳೆ) | ಸಾಮಾನ್ಯ (ಮಹಿಳೆ) |
|---|---|---|---|---|---|---|
| ಚಿತ್ರದುರ್ಗ | 24 (12) | 7 (4) | 5 (3) | 0 (0) | 0 (0) | 12 (5) |
| ಹೊಸದುರ್ಗ | 21 (11) | 5 (3) | 2 (1) | 2 (1) | 1 (1) | 11 (5) |
| ಹಿರಿಯೂರು | 23 (12) | 6 (3) | 2 (1) | 2 (1) | 1 (1) | 12 (6) |
| ಚಳ್ಳಕೆರೆ | 25 (13) | 5 (3) | 7 (4) | 0 (0) | 0 (0) | 13 (6) |
| ಮೊಳಕಾಲ್ಮುರು | 13 (7) | 2 (1) | 4 (2) | 0 (0) | 0 (0) | 7 (4) |
| ಹೊಳಲ್ಕೆರೆ | 19 (10) | 5 (3) | 2 (1) | 2 (1) | 0 (0) | 10 (5) |
| ಜಿಲ್ಲೆಯ ಒಟ್ಟು | 125 (65) | 30 (17) | 22 (12) | 6 (3) | 2 (2) | 65 (31) |
(ಗಮನಿಸಿ: ಆವರಣದಲ್ಲಿರುವ ಸಂಖ್ಯೆಗಳು ಪ್ರತಿಯೊಂದು ಪ್ರವರ್ಗದಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಸೂಚಿಸುತ್ತವೆ)