ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ನವರಾತ್ರಿ ಉಪವಾಸದಲ್ಲಿರುವ ಸುದೀಪ್, ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಬಂದಿಳಿದರು. ಹೆಲಿಪ್ಯಾಡ್ನಿಂದ ಇಳಿದ ಕೂಡಲೇ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಮಾದಾರ ಚನ್ನಯ್ಯ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದರು.
ಬಳಿಕ ಮದಕರಿ ನಾಯಕ ಜಯಂತೋತ್ಸವ ವೇದಿಕೆಗೂ ಬರಿಗಾಲಲ್ಲೇ ನಡೆದು ಬಂದು, ಕಾರ್ಯಕ್ರಮದುದ್ದಕ್ಕೂ ಬರಿಗಾಲಲ್ಲೇ ಇದ್ದು ಗಮನ ಸೆಳೆದರು.