ಚಿತ್ರದುರ್ಗ: ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಹುಲ್ ಗಾಂಧಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದರು.
ನಗರದ ವಾಲ್ಮೀಕಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ವಿಪಕ್ಷ ನಾಯಕನಿಗೆ ನಾಲಾಯಕ್:
ರಾಹುಲ್ ಗಾಂಧಿಗೆ ಈಗ ರಾಹುಕಾಲ. ಅದಕ್ಕೆ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗವನ್ನು ತೆಗೆಯಲು ಸಂವಿಧಾನದಲ್ಲಿ ನಿಯಮ ಇದೆ. ನಾನು ಡಿಕೆಶಿ ಭ್ರಷ್ಟ ಎಂದು ರಸ್ತೆಯಲ್ಲಿ ಕೂಗಿದರೆ ಡಿಕೆಶಿ ಸಿಎಂ ಸ್ಥಾನದಿಂದ ಇಳಿಯುತ್ತಾರಾ? ಅದು ವಿಧಾನಸಭೆಯಲ್ಲಿ ಬಹುಮತದಿಂದ ಆಗಬೇಕು, ಬೀದಿ ನಾಟಕದಿಂದಲ್ಲ. ಇದು ಸಂವಿಧಾನಾತ್ಮಕ ನಡೆಯಲ್ಲ ಎಂದು ಅಶೋಕ್ ಲೇವಡಿ ಮಾಡಿದರು.
ನೆಹರು, ಇಂದಿರಾ ಗಾಂಧಿ ಕಾಲದಲ್ಲಿ ರಚನೆಯಾದ ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ ಆಯೋಗ ಸರಿಯಿತ್ತಾ? ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಸರಿಯಿತ್ತಾ? ಆಗ ಸರಿಯಿದ್ದ ಆಯೋಗ ಈಗ ಸೋತಾಗ ಸರಿಯಿಲ್ಲವಾ? ಕಾಂಗ್ರೆಸ್ ಗೆದ್ದರೆ ಭರ್ಜರಿ, ಸೋತರೆ ಕೆಟ್ಟದ್ದು ಎನ್ನುವುದು ರಾಹುಲ್ ಗಾಂಧಿ ಮನಸ್ಥಿತಿ. ಇಡಿ, ಸಿಬಿಐ, ಚುನಾವಣಾ ಆಯೋಗ ಬಿಜೆಪಿಯದ್ದು, ಕೆಪಿಎಸ್ಸಿ ಬಗ್ಗೆ ಹೈಕೋರ್ಟ್ ತೀರ್ಪು ಸರಿಯಿಲ್ಲ, ಸುಪ್ರೀಂಕೋರ್ಟ್ ತೀರ್ಪು ಸರಿಯಿಲ್ಲ ಎನ್ನುತ್ತಾರೆ. ಅವರು ವಿಪಕ್ಷ ನಾಯಕನಿಗೆ ಲಾಯಕ್ಕಿಲ್ಲ. ಹಿಂದೆ ನಯಾಪೈಸೆ ಬೆಲೆ ಇಲ್ಲದ ರಾಹುಲ್ ಗೆ ಈಗ ಕಾಂಗ್ರೆಸ್ ಪಕ್ಷದ ಮೇಲೆ ಸವಾರಿ ಮಾಡಿ ರೀಚ್ ಆಗುವ ಆಸೆ ಎಂದು ವ್ಯಂಗ್ಯವಾಡಿದರು.
ಡಿಕೆಶಿ ವಿರುದ್ಧ ಏಕವಚನ:
ಸಿಎಂ ಡಿ.ಕೆ.ಶಿವಕುಮಾರ್ಗೆ ಪಿತ್ತ ನೆತ್ತಿಗೇರಿದೆ. ಸ್ವಾಮೀಜಿಗಳು ನನ್ನ ಸೇವೆ ಮಾಡಬೇಕು ಎಂದಿದ್ದೀರಿ. ಅದರ ರಾ ವಿಡಿಯೋ ಮಾಧ್ಯಮಗಳಲ್ಲಿ ಬಂದಿದೆ. ತಿರುಚಿದ್ದಾರೆ ಎನ್ನುತ್ತೀರಿ, ಮಾಧ್ಯಮದವರೆಲ್ಲಾ ಬಿಜೆಪಿಯವರಾ? ಇದು ಮಾಡರ್ನ್ ಯುಗ, ಶಿಲಾಯುಗ ಅಲ್ಲ. ಹೇಳೋದನ್ನು ಹೇಳಿಬಿಟ್ಟಿದ್ದೀಯಾ ಮಿಸ್ಟರ್ ಡಿಕೆ ಶಿವಕುಮಾರ್. ಮಾನ ಮರ್ಯಾದೆ ಇದ್ದರೆ ಸ್ವಾಮೀಜಿಗಳ ಎದುರು ಕ್ಷಮೆ ಕೇಳು ಎಂದರು.
ಮುಲ್ಲಾಗಳ ಸಭೆಯಲ್ಲಿ ಮುಲ್ಲಾಗಳು ನನ್ನ ಸೇವೆ ಮಾಡಿ ಎಂದು ಹೇಳುವ ಧೈರ್ಯ ನಿನಗಿದೆಯಾ? ಹಿಂದೂ ಸ್ವಾಮೀಜಿಗಳ ಬಗ್ಗೆ ಮಾತ್ರ ಅವಹೇಳನ ಮಾಡುತ್ತೀರಿ. ವಿಭೂತಿ, ನಾಮ ಹಾಕಿದರೆ ಹಿಂದೂ ಆಗಲ್ಲ. ಮಠಗಳು ಲಕ್ಷಾಂತರ ಶಾಲೆಗಳನ್ನು ಕಟ್ಟಿ ಹಿಂದೂ ಧರ್ಮದ ಪಾವಿತ್ರ್ಯತೆ ಉಳಿಸಿವೆ. ಇಷ್ಟು ದಿನ ಸಿದ್ದರಾಮಯ್ಯ ಅವರನ್ನು ಒದ್ದು ಹೊರಹಾಕಿದಿರಿ, ಈಗ ಮಾಧ್ಯಮಗಳ ಮೇಲೆ ಬಿದ್ದಿದ್ದೀರಾ ಎಂದು ಕಿಡಿಕಾರಿದರು.
2028ಕ್ಕೆ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಬರುವುದು ಸೂರ್ಯ-ಚಂದ್ರ ಹುಟ್ಟುವಷ್ಟೇ ಸತ್ಯ. ನೂರು ಡಿಕೆಶಿಗಳು ಬಂದರೂ ತಡೆಯಲು ಆಗಲ್ಲ. ಸಿಎಂ ಯಾರಾಗಬೇಕು ಎಂದು ಎನ್ಡಿಎ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅಶೋಕ್ ಹೇಳಿದರು.