ಮೊಣಕಾಲ್ಮೂರು (ಚಿತ್ರದುರ್ಗ ಲೈವ್): ಮೊಣಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಪಾಳೆಯದ ಆಂತರಿಕ ಬೇಗುದಿ ಮತ್ತೊಮ್ಮೆ ಭುಗಿಲೆದ್ದಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, “ಕ್ಷೇತ್ರ ಬಿಟ್ಟು ಕ್ಷೇತ್ರ ಅಲೆಯುವ ಬದಲು, ಎಲ್ಲಿ ಸೋತಿದ್ದೀಯೋ ಅಲ್ಲೇ ಗೆದ್ದು ತೋರಿಸು” ಎಂದು ಬಹಿರಂಗ ಸವಾಲು ಹಾಕಿದ್ದಾರೆ.
ಪಿಎಗಳ ಮಾತು ಕೇಳಿ ರಾಜಕೀಯ ಮುಗಿಸ್ಕೊಬೇಡ:
ಶ್ರೀರಾಮುಲು ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ ತಿಪ್ಪೇಸ್ವಾಮಿ, “ನಿನ್ನ ಪಿಎಗಳ ಮಾತು ಕಟ್ಟಿಕೊಂಡು ಬಂದು ನಿನ್ನ ರಾಜಕೀಯವನ್ನು ಇಲ್ಲಿಗೇ ಕೊನೆ ಮಾಡಿಕೊಳ್ಳಬೇಡ. ನೀನು ಎಲ್ಲೆಲ್ಲಿ ಸೋತಿದ್ದೀಯೋ ಅಲ್ಲೇ ಇರು. ಬಳ್ಳಾರಿಯಲ್ಲಿ ನಾಗೇಂದ್ರನಿಗೆ ಹೆದರಿ ಇಲ್ಲಿಗೆ ಬಂದಿದ್ದೀಯಾ? ಅಲ್ಲಿಯೇ ತೊಡೆ ತಟ್ಟಿ, ನಾನು ಗಂಡಸು ಎಂದು ಹೇಳಿದ್ದೆಯಲ್ಲ, ಅಲ್ಲೇ ಗೆದ್ದು ತೋರಿಸು. ಈ ಕ್ಷೇತ್ರಕ್ಕೆ ಬಂದು ಯಾಕೆ ಆಟ ಆಡುತ್ತಿದ್ದೀಯಾ? ಇಲ್ಲಿ ನಾನು ನಿನಗೆ ಜಾಗ ಬಿಟ್ಟುಕೊಡುವುದಿಲ್ಲ” ಎಂದು ಗುಡುಗಿದ್ದಾರೆ.
Read: ಚಿತ್ರದುರ್ಗದ ರೈತರಿಗೆ ಸಿಹಿಸುದ್ದಿ: ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಮೋಟಾರ್ ಪಂಪ್ ವಿತರಣೆ ಆರಂಭ!
ನಾನಾಗಿ ಪಾರ್ಟಿಗೆ ಬಂದಿಲ್ಲ, ನೀನೇ ಮನೆಗೆ ಬಂದಿದ್ದು:
“ನಾನೇನು ನಿನ್ನ ಪಾರ್ಟಿಗೆ ಬರುತ್ತೇನೆ ಎಂದು ಗೋಗರೆದು ಬಂದವನಲ್ಲ. ನೀನೇ ನನ್ನ ಮನೆಗೆ ಬಂದು, ‘ನನ್ನಿಂದ ತಪ್ಪಾಯ್ತಣ್ಣ, ನಾವು ನೀವು ಒಂದೇ’ ಎಂದು ಹೇಳಿ ಕರೆದುಕೊಂಡು ಬಂದೆ. ಬೇಕಾದಷ್ಟು ಸಂಪನ್ಮೂಲ ಸಹಾಯ ಮಾಡ್ತೀನಿ ಎಂದು ಭರವಸೆ ನೀಡಿ ಕೊನೆಗೆ ಒಳಸಂಚು ಮಾಡಿದೆ. ನಿನ್ನ ಈ ಕೆಟ್ಟ ಬುದ್ಧಿಯಿಂದಲೇ ಇವತ್ತು ರಾಜಕೀಯದಲ್ಲಿ ನಿನಗೆ ಹಿನ್ನಡೆಯಾಗಿರುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಣ್ಣ ಬಳಿದುಕೊಂಡು ಬಂದರೆ ಜನ ಮರುಳಾಗಲ್ಲ:
“ನಿನ್ನ ಪಿಎಗಳ ಮಾತು ಕೇಳಿಕೊಂಡು ಇಡೀ ಕ್ಷೇತ್ರ ಹಾಗೂ ಜಿಲ್ಲೆಯನ್ನು ಒಡೆಯುವ ಕೆಲಸ ಮಾಡಬೇಡ. ನಾಯಕ ಎಂದು ಹೇಳಿಕೊಂಡು ತಿರುಗಲು ನಿನಗೆ ನಾಚಿಕೆಯಾಗಬೇಕು. ಬಣ್ಣ ಬಳಿದುಕೊಂಡು, ಡ್ರೆಸ್ ಹಾಕಿಕೊಂಡು ಬಂದರೆ ಮೊಣಕಾಲ್ಮೂರು ಜನ ಮರುಳಾಗುವುದಿಲ್ಲ. ಜನ ನನಗಾಗಿ ಕಾದಿದ್ದಾರೆ. ಕೇವಲ 15 ದಿನಗಳಲ್ಲಿ ನನಗೆ 87 ಸಾವಿರ ವೋಟ್ ಕೊಟ್ಟಿದ್ದರು. ನಮ್ಮ ಜನ ತಿಪ್ಪೇಸ್ವಾಮಿಗೆ ಮತ ಹಾಕಲು ಕಾದು ಕುಳಿತಿದ್ದಾರೆ. ಎಲ್ಲವನ್ನೂ ನಿನ್ನ ಸ್ವಾರ್ಥಕ್ಕೆ ಬಳಸಿಕೊಳ್ಳದೆ ಲೋಕಲ್ ನಾಯಕರಿಗೆ ಅವಕಾಶ ಬಿಟ್ಟುಕೊಡು” ಎಂದು ಎಚ್ಚರಿಕೆ ನೀಡಿದ್ದಾರೆ.
“ಈಗಲಾದರೂ ಬುದ್ಧಿ ಕಲಿತು ಎಲ್ಲಿ ಸೋತಿದ್ದೀಯೋ ಅಲ್ಲಿ ಹೋಗಿ ಕೆಲಸ ಮಾಡು, ಆಗ ಮಾತ್ರ ನಿನಗೆ ಒಳ್ಳೆಯದಾಗುತ್ತದೆ. ಇಲ್ಲವಾದರೆ ಇಡೀ ರಾಜ್ಯದಲ್ಲಿ ನಿನಗೆ ಎಲ್ಲೂ ಗೌರವ ಸಿಗದ ಕಾಲ ಹತ್ತಿರ ಬರುತ್ತಿದೆ, ಕಾದು ನೋಡು” ಎಂದು ತಿಪ್ಪೇಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಒಟ್ಟಿನಲ್ಲಿ, ಮೊಣಕಾಲ್ಮೂರು ಕ್ಷೇತ್ರದ ಮೇಲಿನ ಹಿಡಿತಕ್ಕಾಗಿ ಶ್ರೀರಾಮುಲು ಹಾಗೂ ತಿಪ್ಪೇಸ್ವಾಮಿ ನಡುವಿನ ಶೀತಲ ಸಮರ ಈಗ ತಾರಕಕ್ಕೇರಿದ್ದು, ಮುಂದಿನ ದಿನಗಳಲ್ಲಿ ಈ ತಿಕ್ಕಾಟ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
- B. Nagendra
- B. Sriramulu
- Ballari
- BJP Infighting
- Chitradurga
- Chitradurga District
- Chitradurga Live
- Chitradurga News
- Karnataka BJP
- Karnataka Politics
- Molakalmuru
- Molakalmuru Assembly Constituency
- Molakalmuru BJP
- Molakalmuru News
- S Thippeswamy
- Sriramulu
- Thippeswamy
- ಎಸ್. ತಿಪ್ಪೇಸ್ವಾಮಿ
- ಕರ್ನಾಟಕ ಬಿಜೆಪಿ
- ಕರ್ನಾಟಕ ರಾಜಕೀಯ
- ಚಿತ್ರದುರ್ಗ
- ಚಿತ್ರದುರ್ಗ ಜಿಲ್ಲೆ
- ಬಳ್ಳಾರಿ
- ಬಿ. ನಾಗೇಂದ್ರ
- ಬಿ. ಶ್ರೀರಾಮುಲು
- ಮೊಣಕಾಲ್ಮೂರು
- ಮೊಣಕಾಲ್ಮೂರು ಬಿಜೆಪಿ
- ಮೊಣಕಾಲ್ಮೂರು ವಿಧಾನಸಭಾ ಕ್ಷೇತ್ರ