Home ರಾಜ್ಯ ಭೋವಿ ಸಮಾಜದ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಭೋವಿ ಸಮ್ಮೇಳನ : ಇಮ್ಮಡಿ ಶ್ರೀ
ರಾಜ್ಯ

ಭೋವಿ ಸಮಾಜದ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಮಟ್ಟದ ಭೋವಿ ಸಮ್ಮೇಳನ : ಇಮ್ಮಡಿ ಶ್ರೀ

Share
ಭೋವಿ ಸಮಾಜ, ಬೃಹತ್ ಸಮಾವೇಶ, ಶಿವರಾಜ್ ತಂಗಡಗಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಲಬುರಗಿ, ಬೆಂಗಳೂರು, ಮೀಸಲಾತಿ, Bhovi Samaja, Shivaraj Tangadagi, Bhovi Convention 2027
Share

ಬೆಂಗಳೂರು: ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಭೋವಿ ಸಮಾಜದ ಸಮ್ಮೇಳನಗಳು ಆ ಭಾಗದಲ್ಲಿ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದ ಸಂಘಟನೆ, ಜನಸಂಖ್ಯೆ ಹಾಗೂ ಸಮಸ್ಯೆಗಳನ್ನು ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಗಮನಕ್ಕೆ ತರುವ ಉದ್ದೇಶದಿಂದ ಕಲಬುರಗಿಯಲ್ಲಿ ಬೃಹತ್ ಪಕ್ಷಾತೀತ ಸಮಾವೇಶ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಚಿತ್ರದುರ್ಗ- ಬಾಗಲಕೋಟೆ ಭೋವಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಬೆಂಗಳೂರಿನಲ್ಲಿ ಭಾನುವಾರ ನಡೆದ ಭೋವಿ ಸಮಾಜದ ಮುಖಂಡರ ರಾಜ್ಯ ಮಟ್ಟದ ಚಿಂತನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಸಮುದಾಯದ ಸಂಘಟನೆ, ಸಮಸ್ಯೆಗಳು ಹಾಗೂ ಅಗತ್ಯಗಳ ಬಗ್ಗೆ ಇನ್ನಷ್ಟು ಗಮನ ಹರಿಸಬೇಕಿದೆ. “ನಮ್ಮ ಜನಸಂಖ್ಯೆ, ಶಕ್ತಿ, ಕಷ್ಟ-ಕಾರ್ಪಣ್ಯಗಳು ಹಾಗೂ ನಮ್ಮ ಬೇಡಿಕೆಗಳನ್ನು ರಾಜಕೀಯ ನಾಯಕತ್ವಕ್ಕೆ ಅರ್ಥ ಮಾಡಿಸುವ ಅಗತ್ಯವಿದೆ. ವಿಶೇಷವಾಗಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬೆಳೆಯುವ ನಾಯಕರಿಗೆ ನಮ್ಮ ಸಮಾಜದ ಅಸ್ತಿತ್ವ ಮತ್ತು ಶಕ್ತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸಮಾವೇಶ ನಡೆಸುವ ಅಗತ್ಯವಿದೆ ಎಂದರು.

ಈ ಸಮಾವೇಶವು ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರದೆ ಪಕ್ಷಾತೀತವಾಗಿ ನಡೆಯಲಿದೆ. ಸಮಾಜದವರು ವಿವಿಧ ರಾಜಕೀಯ ಪಕ್ಷಗಳಲ್ಲಿ ಇದ್ದರೂ, ಸಮಾಜದ ಹಿತಾಸಕ್ತಿಯ ವಿಚಾರದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸಬೇಕು ಎಂಬ ಆಶಯ ವ್ಯಕ್ತವಾಯಿತು.

ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಮಾವೇಶಕ್ಕೆ ಕರೆತರುವ ಮೂಲಕ ಸಮಾಜದ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯನ್ನು ಪ್ರದರ್ಶಿಸಬಹುದು. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮುಖಂಡರು ಹೇಳಿದರು.

ಬೆಂಗಳೂರಿನಲ್ಲಿ ಪ್ರತಿಭಟನೆ ಅಥವಾ ಸಮ್ಮೇಳನ ನಡೆಸಿದಾಗಲೆಲ್ಲ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಇದೇ ಒಗ್ಗಟ್ಟನ್ನು ಸಮಾಜದ ಹಕ್ಕುಗಳು ಮತ್ತು ಬೇಡಿಕೆಗಳಿಗಾಗಿ ಬಳಸಿಕೊಳ್ಳ. ಬೇಕು” ಎಂದು ಅವರು ಕರೆ ನೀಡಿದರು.

ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಭೋವಿ ಸಮಾಜದ ಅಜಾತ ಶತ್ರು. ಅವರ ಭೋವಿ ಸಮಾಜದಿಂದ ಸಚಿವರಾದವರಲ್ಲ, ಅವರದ್ದೇಯಾದ ಶಕ್ತಿಯಿದೆ.ಆ‌ಮೂಲಕ‌ ಸಚಿವರಾದವರು‌ . ಇಂತಹದೊಂದು ಸಭೆ ಕರೆದಿರುವುದು ಸಮಾಜದ ಮೇಲಿನ ಅವರ ಕಾಳಜಿಗೆ ಸಾಕ್ಷಿ. ಇದು ನಾಯಕರೆನಿಸಿಕೊಳ್ಳುವವರ ಲಕ್ಷಣ ಎಂದರು.

Author

Share

Loading News...

More News

Related Articles

ಯತಿಗಳ ಜೀವನ ಸುಲಭವಾಗಿರುವುದಿಲ್ಲ, ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು: ಡಾ. ಶಿವಮೂರ್ತಿ ಮುರುಘಾ ಶರಣರು

ದಾವಣಗೆರೆ: "ಯತಿಗಳು ಹಾಗೂ ಸಾಧಕರ ಜೀವನ ಸುಲಭವಾಗಿರುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳು ಹಾಗೂ ಸಮಸ್ಯೆಗಳು...

ತಿರುಮಲ: ಕರ್ನಾಟಕದ 19 ಹಿಂದುಳಿದ, ದಲಿತ ಮಠಾಧೀಶರಿಂದ ವೆಂಕಟೇಶ್ವರನ ದರ್ಶನ

ತಿರುಮಲ: ಕರ್ನಾಟಕದ ವಿವಿಧ ಭಾಗಗಳ ಹಿಂದುಳಿದ ಹಾಗೂ ಎಸ್‌ಸಿ–ಎಸ್‌ಟಿ ಸಮುದಾಯಗಳನ್ನು ಪ್ರತಿನಿಧಿಸುವ 19 ಪೀಠಾಧೀಶರು ಮತ್ತು...

ಸಿಎಂ ಎದುರು ₹1,000 ಕೋಟಿ ಅನುದಾನದ ಬೇಡಿಕೆ: ಜನವರಿಯಲ್ಲಿ ಭೋವಿ ಸಮಾಜದ ಬೃಹತ್ ಸಮಾವೇಶಕ್ಕೆ ಸಿದ್ಧತೆ

ಬೆಂಗಳೂರು: ಭೋವಿ ಸಮಾಜದ ಸಂಘಟನೆ ಬಲಪಡಿಸಿ, ಸಮಾಜದ ಹಕ್ಕುಗಳು ಮತ್ತು ಬೇಡಿಕೆಗಳ ಈಡೇರಿಕೆಗೆ ರಾಜ್ಯಮಟ್ಟದಲ್ಲಿ ದೊಡ್ಡ...

ಚಿರತೆ ಸೆರೆ ವೇಳೆ ಅರಣ್ಯ ಸಿಬ್ಬಂದಿ ಮೇಲೆ ದಾಳಿ

ದಾವಣಗೆರೆ: ಅಪಘಾತಕ್ಕೀಡಾಗಿ ರಾಷ್ಟ್ರೀಯ ಹೆದ್ದಾರಿ ಬದಿಗೆ ಬಂದಿದ್ದ ಚಿರತೆಯನ್ನು ಸೆರೆಹಿಡಿಯುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ...