Home ಚಳ್ಳಕೆರೆ ನಾಯಕನಹಟ್ಟಿ: ನಕಲಿ ಚಿನ್ನ, ಅಸಲಿ ನಷ್ಟ: ತೆಲಂಗಾಣದ ವ್ಯಕ್ತಿಗೆ 10 ಲಕ್ಷ ರೂ. ವಂಚನೆ
ಚಳ್ಳಕೆರೆಚಿತ್ರದುರ್ಗ

ನಾಯಕನಹಟ್ಟಿ: ನಕಲಿ ಚಿನ್ನ, ಅಸಲಿ ನಷ್ಟ: ತೆಲಂಗಾಣದ ವ್ಯಕ್ತಿಗೆ 10 ಲಕ್ಷ ರೂ. ವಂಚನೆ

Share
ನಾಯಕನಹಟ್ಟಿ: ನಕಲಿ ಚಿನ್ನ, ಅಸಲಿ ನಷ್ಟ: ತೆಲಂಗಾಣದ ವ್ಯಕ್ತಿಗೆ 10 ಲಕ್ಷ ರೂ. ವಂಚನೆ
Share

ಚಿತ್ರದುರ್ಗ (Chitradurga Live): ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರಿಗೆ ನಕಲಿ ಚಿನ್ನ ನೀಡಿ 10 ಲಕ್ಷ ರೂ. ವಂಚಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಬೊಟ್ಲವನಪರ್ತಿ ಗ್ರಾಮದ ಬೋಡಿಗ ಶ್ರೀನಿವಾಸ್ ವಂಚನೆಗೊಳಗಾದವರು. ಆರು ವರ್ಷಗಳ ಹಿಂದೆ ಈ ಭಾಗದಲ್ಲಿ ಭತ್ತ ಕೊಯ್ಲು ಯಂತ್ರದ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದ ರಮೇಶ್ ಎಂಬಾತನೇ ಈ ವಂಚನೆ ಎಸಗಿದ್ದಾನೆ ಎಂದು ಶ್ರೀನಿವಾಸ್ ದೂರಿನಲ್ಲಿ ತಿಳಿಸಿದ್ದಾರೆ.

ನಡೆದಿದ್ದೇನು? ರಮೇಶ್ ತನ್ನ ಸ್ನೇಹಿತನ ಬಳಿ 250 ಗ್ರಾಂ ಚಿನ್ನದ ಗಟ್ಟಿಗಳಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಶ್ರೀನಿವಾಸ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ್ದನು. ನಂಬಿಕೆ ಗಳಿಸುವ ಉದ್ದೇಶದಿಂದ ಸೆಪ್ಟೆಂಬರ್ 18ರಂದು ಮೊಳಕಾಲ್ಮೂರು ತಾಲೂಕಿನ ಮೊಗಲಹಳ್ಳಿ ಗ್ರಾಮಕ್ಕೆ ಶ್ರೀನಿವಾಸ್ ಅವರನ್ನು ಕರೆದೊಯ್ದು ಎರಡು ಅಸಲಿ ಚಿನ್ನದ ಗಟ್ಟಿಗಳನ್ನು ನೀಡಿದ್ದನು. ಅವುಗಳನ್ನು ಪರೀಕ್ಷಿಸಿದಾಗ ಅಸಲಿ ಎಂದು ಖಚಿತವಾದ ಬಳಿಕ ಶ್ರೀನಿವಾಸ್ ವ್ಯವಹಾರಕ್ಕೆ ಒಪ್ಪಿಕೊಂಡಿದ್ದರು.

ಬಳಿಕ ಸೆಪ್ಟೆಂಬರ್ 26ರಂದು ಕರೆ ಮಾಡಿದ ರಮೇಶ್, 10 ಲಕ್ಷ ರೂ. ಹಣದೊಂದಿಗೆ ನಾಯಕನಹಟ್ಟಿ ಹೋಬಳಿಯ ಅಬೆನಹಳ್ಳಿ ಸಮೀಪದ ಕೊರಡಿಹಳ್ಳಿ ಗ್ರಾಮದ ಬಳಿಯ ಚಿನ್ನಹಗರಿ ಹಳ್ಳದ ಬಳಿ ಬರುವಂತೆ ತಿಳಿಸಿದ್ದನು. ಅಲ್ಲಿ 250 ಗ್ರಾಂ ತೂಕದ ನಕಲಿ ಚಿನ್ನದ ಗಟ್ಟಿಗಳನ್ನು ನೀಡಿ 10 ಲಕ್ಷ ನಗದು ಹಾಗೂ ಶ್ರೀನಿವಾಸ್ ಅವರ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದಾನೆ.

ಶ್ರೀನಿವಾಸ್ ತಮ್ಮ ಊರಿಗೆ ಮರಳಿ ಗಟ್ಟಿಗಳನ್ನು ಪರೀಕ್ಷಿಸಿದಾಗ ಅವು ನಕಲಿ ಚಿನ್ನ ಎಂಬುದು ತಿಳಿದುಬಂದಿದೆ. ಈ ವಂಚನೆಯಲ್ಲಿ ರಮೇಶ್ ಸೇರಿದಂತೆ ಒಟ್ಟು ಮೂವರು ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಘಟನೆ ಕುರಿತು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಜಿ. ಪಾಂಡುರಂಗ ತನಿಖೆ ಆರಂಭಿಸಿದ್ದಾರೆ.

Author

Share

Loading News...

More News

Related Articles

ಮದಕರಿ ಜಯಂತಿಗೆ ಬಂದ ಕಿಚ್ಚ: ಹೆಲಿಪ್ಯಾಡ್‌ನಿಂದ ವೇದಿಕೆವರೆಗೆ ಬರಿಗಾಲ ನಡಿಗೆ

ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವದಲ್ಲಿ ಭಾಗವಹಿಸಲು ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಕಿಚ್ಚ ಸುದೀಪ್ ಅವರ ಭಕ್ತಿ...

ಚಿತ್ರದುರ್ಗದ ಜನರಿಗೆ ಕಿಚ್ಚನ ಭರವಸೆ: ಆಗಾಗ ಬಂದು ಭೇಟಿ ಮಾಡ್ತೇನೆ

ಚಿತ್ರದುರ್ಗ: ಒಂದು ವರ್ಷದ ನಂತರ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿರುವ ನಟ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಂದಿಗೆ...

ಮೀಸಲಾತಿ ರದ್ದು, ಸ್ಟಿಂಗ್ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಶ್ರೀರಾಮುಲು ಕಿಡಿ

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರಕ್ಕೆ ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು...

ಚಿತ್ರದುರ್ಗದಲ್ಲಿ ಸಂಸದ ಕಾರಜೋಳ ಗುಡುಗು: ಮೀಸಲಾತಿ ರದ್ದಿಗೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ

ಚಿತ್ರದುರ್ಗ: ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ರದ್ದಾಗಲು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಬಿಜೆಪಿ...