ಚಿತ್ರದುರ್ಗ: ನಗರದ ಜೆಜೆ ಹಟ್ಟಿ ನಿವಾಸಿ, ನಿವೃತ್ತ ಶಿಕ್ಷಕಿ ಜಲಜಾಕ್ಷಮ್ಮ (73) ಶುಕ್ರವಾರ ಮಧ್ಯರಾತ್ರಿ ನಿಧನ ಹೊಂದಿದರು. ಪುತ್ರಿ, ಇಬ್ಬರು ಪುತ್ರರು, ಸಹೋದರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಡಾ.ಬಿ.ತಿಪ್ಪೇಸ್ವಾಮಿ ಹಾಗೂ ಅಪಾರ ಬಂಧುಬಳಗದವರು ಇದ್ದಾರೆ. ಹೊಳಲ್ಕೆರೆ ರಾ್ತೆ, ಕನಕ ವೃತ್ತ ಸಮೀಪದ ರುದ್ರಭೂಮಿಯಲ್ಲಿ ಶನಿವಾರ (22-08-2026) ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಅಂತಿಮ ದರ್ಶನ: ಜೆಜೆ ಹಟ್ಟಿ ಡಾ.ತಿಪ್ಪೇಸ್ವಾಮಿ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಪಕ್ಷದ ರಾಜಕಾರಣಿಗಳು, ಸಂಘಟನೆಗಳ ಮುಖ್ಯಸ್ಥರು ಸೇರಿ ಅನೇಕರು ಅಂತಿಮನಮನ ಸಲ್ಲಿಸಿದರು.
Leave a comment