ಬೆಂಗಳೂರು, ಆ.27: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರ ಪುತ್ರಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ದಿವಂಗತ ಎಸ್. ಬಿ. ಮುದ್ದಪ್ಪ ಅವರ ಧರ್ಮಪತ್ನಿ ಪ್ರತಿಭಾ ಮುದ್ದಪ್ಪ (ವಯೋಸಹಜ) ಅವರು ಗುರುವಾರ ಸಂಜೆ ನಿಧನರಾಗಿದ್ದಾರೆ.
ಮೃತರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ ಆಗಸ್ಟ್ 28, 2026 ರಂದು 11:00 ಗಂಟೆಯವರೆಗೆ ವಿಜಯನಗರದ ಟೆಲಿಫೋನ್ ಎಕ್ಸ್‌ಚೇಂಜ್ ಹತ್ತಿರವಿರುವ ಅವರ ನಿವಾಸದಲ್ಲಿ ಇಡಲಾಗುವುದು.
ಅವರ ಅಂತಿಮ ಸಂಸ್ಕಾರವು ಶುಕ್ರವಾರ ಮಧ್ಯಾಹ್ನ 12:00 ಗಂಟೆಯ ನಂತರ ಮೈಸೂರು ಮುಖ್ಯ ರಸ್ತೆಯ ಗುಡ್ಡದಹಳ್ಳಿಯಲ್ಲಿರುವ ಬಿಬಿಎಂಪಿ (BBMP) ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Leave a comment