Home Podcast ಕಥೆ ಕೆ.ಪಿ.ಓಂಕಾರಮೂರ್ತಿ ಅವರ ಪಾಡಕಾಸ್ಟ್ ಕಥೆಗೆ ಸಹೃದಯಿಗರ ಮೆಚ್ಚುಗೆ: ನೀವೋ ಒಂದು ಬಾರಿ ಆಲಿಸಿ
Podcast ಕಥೆ

ಕೆ.ಪಿ.ಓಂಕಾರಮೂರ್ತಿ ಅವರ ಪಾಡಕಾಸ್ಟ್ ಕಥೆಗೆ ಸಹೃದಯಿಗರ ಮೆಚ್ಚುಗೆ: ನೀವೋ ಒಂದು ಬಾರಿ ಆಲಿಸಿ

Share
Share

ಮರದ ಮನದಲ್ಲೊಂದು ಮೌನ !

ಚಿತ್ರದುರ್ಗ ಮೂಲದ ಬರಹಗಾರ ಕೆ.ಪಿ.ಓಂಕಾರಮೂರ್ತಿ ಅವರ ‘ಮರದ ಮನದಲ್ಲೊಂದು ಮೌನ!’ ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿದ್ದು, ಅದನ್ನು ಚಿತ್ರದುರ್ಗಲೈವ್.ಕಾಂ ನ ಪಾಡ್ ಕಾಸ್ಟ್ ಕಥೆಗಳ ಸರಣಿಗೆ ಮೊದಲ ಕಥೆಯಾಗಿ ಪ್ರಕಟಿಸಿದ್ದು, ಸಹೃದಯಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಓದು ಹಾಗೂ ಬರಹಗಳ ರುಚಿವುಳ್ಳ ಹಲವು ಸಹೃದಯಿಗರು ಕತೆಗಾರನ ಕಥೆಯ ನಿರೂಪಣೆಯ ಶೈಲಿಯ ಬಗ್ಗೆ ಹಿತ ಮಾತುಗಳನ್ನು ಆಡಿದ್ದಾರೆ. ಚಿತ್ರದುರ್ಗಲೈವ್.ಕಾಂ ತಂಡ ಅವಗಾಹನೆಗೆ ದಕ್ಕಿದ ಕೆಲ ಅನಿಸಿಕೆ, ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ. ಮತ್ತೆ ನೀವು ಕೂಡ ಒಮ್ಮೆ ಕಥೆ ಕೇಳಿ.ಲಿಂಕ್ ಕೆಳಗಡೆ ಇದೆ.

ಡಾ.ಎಸ್.ಎನ್.ಹೇಮಂತ ರಾಜು

“ಪುನಃ ಹೇಳಿದ” (re-told) ಕಥೆಯಾಗಿ ಓದಿಸಿಕೊಳ್ಳುವ ಗುಣವಿದೆ. Anecdotes ಗಳನ್ನು ಪುನರ್ ನಿರ್ವಚಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರ ಇಲ್ಲಿ ಇದೆ. Anecdote ಗಳ ಬಹುಮುಖ್ಯ ಅಂಶವೆಂದರೆ ಅದರ ಅಧ್ಯಾಹಾರ! (ಹೇಳದೆ ಬಿಟ್ಟಿರುವುದು). ಆ ಕಾರಣದಿಂದಾಗಿಯೇ ಈ ಮುಂದುವರೆದ ಭಾಗ ಸೃಷ್ಟಿಯಗಿರುವುದು! ಇಲ್ಲಿ ಎರಡನೆಯ ಭಾಗವು ವಾಚ್ಯವಾಗಿದೆ! ಕಥೆಗಳ ಆತ್ಮವಿರುವುದೇ ಅದು ‘ಓದುಗರಲ್ಲಿ ಬೆಳೆಯುವ’ ಗುಣದಲ್ಲಿ… ಖಂಡಿತವಾಗಿ ಒಳ್ಳೆಯ ಪ್ರಯತ್ನ.

– ಡಾ.ಎಸ್.ಎನ್.ಹೇಮಂತ ರಾಜು

ಉಪನ್ಯಾಸಕರು

ಎಚ್. ಎಸ್. ಟಿ.ಸ್ವಾಮಿ

ಮರದ ಮನದಲ್ಲಿ ಇದ್ದಿದ್ದೆ ಕಾಗೆ. ಕಾಗೆಗೆ ನರಿಯ ಜಾಣತನ ಅರ್ಥವಾಗಲು ರೊಟ್ಟಿ ಹೋಗಿ, ಹಣ್ಣು ಬರಬೇಕಾಯಿತು. ಯಾರೇ ಆಗಲಿ ಹೊಗಳಿಕೆಗೆ ಆಗಲೀ, ತೆಗಳಿಕೆಗೆ ಆಗಲೀ ಹಿಗ್ಗಲೂ ಬಾರದು. ಕುಗ್ಗಲೂ ಬಾರದು ಎಂಬ ನೀತಿ ಕಥೆಯನ್ನು ಶ್ರೀಯುತ ಲೇಖಕರಾದ ಕೆ.ಎಂ.ಓಂಕಾರಮೂರ್ತಿಯವರು ತಮ್ಮ *ಮರದ ಮೌನದಲ್ಲೊಂದು ಮೌನ* ಎಂಬ ಕಥೆಯ ಮೂಲಕ ಮೆದುಳಿಗೆ ಮೇವು ಕೊಟ್ಟಿದ್ದಾರೆ.

– ಎಚ್. ಎಸ್. ಟಿ.ಸ್ವಾಮಿ

ಕಾರ್ಯದರ್ಶಿ, ಚಿತ್ರದುರ್ಗ ಸೈನ್ಸ್ ಫೌಂಡೇಶನ್

ರವೀಶ್ ಎನ್.ಎ

ಹೊಗಳಿಕೆಗೆ ಮನಸ್ಸು ತೆರೆದುಕೊಂಡರೆ ಕಳೆದುಕೊಳ್ಳಬೇಕಾದುದೇ ಹೆಚ್ಚು. ಸುಮ್ಮನೇ ಹೊಗಳುವವರು ಏನಾದರೂ ಪ್ರತಿಫಲವನ್ನು ಅಪೇಕ್ಷಿಸುತ್ತಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಕಾಗೆ ಇದನ್ನು ಅರ್ಥ ಮಾಡಿಕೊಂಡಿದ್ದಲ್ಲದೆ ತನ್ನ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳುವ ಮೂಲಕ ಒಂದು ಮೌಲ್ಯದ ಸಂಕೇತವಾಗಿ ಕಂಡು ಬರುತ್ತದೆ. ಒಳ್ಳೆಯ ಕತೆ ಓಂಕಾರಮೂರ್ತಿ.

– ರವೀಶ್ ಎನ್.ಎ

ಚಿಂತಕರು

ಕೊರ್ಲಕುಂಟೆ ತಿಪ್ಪೇಸ್ವಾಮಿ

ಕೇಳುಗರಿಗೆ ಹಿತ ಅನಿಸುವ ವಿಶ್ಲೇಷಣೆ ಮತ್ತು ಒಳ್ಳೆಯ ವಿವರಣೆಯಲ್ಲಿ ವನ ಸಿರಿ ಮತ್ತು ಕಾಗೆಯ ಬಗೆಗಿನ ಮಾತುಗಳು ನನಗೂ ಇಷ್ಟವಾದವು. ಸರ್.

– ಕೊರ್ಲಕುಂಟೆ ತಿಪ್ಪೇಸ್ವಾಮಿ

ಹಿರಿಯ ಪತ್ರಕರ್ತರು


ರಾಜ ಸಿರಿಗೆರೆ

ಕಥೆ (ಕಿರುಗತೆ ಎಂದರೂ ಒಪ್ಪೀತು) ಚೆನ್ನಾಗಿ ಮೂಡಿ ಬಂದಿದೆ. ಕಾಗೆಯ ಒಳಗಿನ ಭ್ರಮಾ ಲೋಕವನ್ನು ಕಥೆ ಚೆನ್ನಾಗಿ ವಿವರಿಸಿದೆ. ಇದು ಕಾಗೆಗೆ ಅನ್ವಯಿಸಿರುವಂತೆ ಮನುಷ್ಯನ ತಲೆಯೊಳಗೆ ತುಂಬಿಕೊಂಡಿರುವ ಭ್ರಮೆಗಳ ಕುರಿತೂ ಚಿತ್ರಿಸಿದೆ. ಕಥೆಯ ಕೊನೆಯ ಎರಡು ಸಾಲು ನನಗೆ ಇಷ್ಟವಾದವು.

– ರಾಜ ಸಿರಿಗೆರೆ

ಹಿರಿಯ ಪತ್ರಕರ್ತರು

ವೀಡಿಯೊವನ್ನು ಇಲ್ಲಿ ವೀಕ್ಷಿಸಿ 👇

Author

  • Prashanth Kumar N

    ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

    ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ.

    ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Loading News...

More News