Home ಚಿತ್ರದುರ್ಗ ಚಿತ್ರದುರ್ಗದ ಹೆಮ್ಮೆಯ ‘ಕೋತಿರಾಜ್’ ಮದುವೆ ಫಿಕ್ಸ್: ವಧು ಯಾರು? ಮುಹೂರ್ತ ಯಾವಾಗ? ಇಲ್ಲಿದೆ ಸಂಪೂರ್ಣ ವಿವರ
ಚಿತ್ರದುರ್ಗ

ಚಿತ್ರದುರ್ಗದ ಹೆಮ್ಮೆಯ ‘ಕೋತಿರಾಜ್’ ಮದುವೆ ಫಿಕ್ಸ್: ವಧು ಯಾರು? ಮುಹೂರ್ತ ಯಾವಾಗ? ಇಲ್ಲಿದೆ ಸಂಪೂರ್ಣ ವಿವರ

Share
Share
ಚಿತ್ರದುರ್ಗ: ಬರಿಗೈಯಲ್ಲಿ ಕೋಟೆಯ ಗೋಡೆಗಳನ್ನು ಲೀಲಾಜಾಲವಾಗಿ ಏರುತ್ತಾ ‘ಸ್ಪೈಡರ್ ಮ್ಯಾನ್’, ‘ಮಂಕಿ ಮ್ಯಾನ್’ ಎಂದೇ ವಿಶ್ವವಿಖ್ಯಾತಿ ಪಡೆದಿರುವ ಚಿತ್ರದುರ್ಗದ ಹೆಮ್ಮೆಯ ಜ್ಯೋತಿರಾಜ್ (ಕೋತಿರಾಜ್) ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಹಲವು ವರ್ಷಗಳಿಂದ ಒಂಟಿಯಾಗಿದ್ದ ಕೋತಿರಾಜ್ ಅವರ ಬಾಳಿನಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗುತ್ತಿದ್ದು, ಮದುವೆ ಮುಹೂರ್ತ ಫಿಕ್ಸ್ ಆಗಿದೆ.

ವಧು ಯಾರು ಗೊತ್ತೇ?

ಜ್ಯೋತಿರಾಜ್ ಅವರ ಕೈಹಿಡಿಯುತ್ತಿರುವ ಹುಡುಗಿಯ ಹೆಸರು ನಿವೇದಿತಾ. ಇವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯವರಾಗಿದ್ದು, ಲಿಂಗರಾಜಪ್ಪ ಹಾಗೂ ದ್ರಾಕ್ಷಾಯಣಿಯಮ್ಮ ದಂಪತಿಯ ಪುತ್ರಿ. 37 ವರ್ಷದ ಜ್ಯೋತಿರಾಜ್ ಅವರಿಗೆ ನಿವೇದಿತಾ (26) ಅವರದ್ದೇ ಸಂಬಂಧಿಯಾಗಿದ್ದು (ಅಕ್ಕನ ಮಗಳು), ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಇದೊಂದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಖುದ್ದು ಜ್ಯೋತಿರಾಜ್ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಸದ್ಯ ನಿವೇದಿತಾ ಅವರ ಕುಟುಂಬ ಡಿಆರ್ ಡಿಒ (DRDO) ಬಳಿ ವಾಸವಿದ್ದಾರೆ.

ಜೋಗ್ ಫಾಲ್ಸ್ ದುರಂತದಿಂದ ನಿಂತಿದ್ದ ಮದುವೆ!

2018-19ರಲ್ಲೇ ಜ್ಯೋತಿರಾಜ್ ಮದುವೆ ಆಗಬೇಕಿತ್ತು. ಆದರೆ ಮದುವೆಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಜೋಗ್ ಫಾಲ್ಸ್ ನಲ್ಲಿ ಪ್ರಪಾತಕ್ಕೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಆ ಭೀಕರ ಅಪಘಾತದಿಂದಾಗಿ ಆಗಿನ ಮದುವೆ ಕ್ಯಾನ್ಸಲ್ ಆಗಿ, ಆ ಹುಡುಗಿ ಬೇರೆ ಕಡೆ ಮದುವೆಯಾಗಿದ್ದರು. “ಆ ನೋವಿನ ಸಮಯದಲ್ಲಿ ನನಗೆ ಧೈರ್ಯ ತುಂಬಿ, ನನ್ನನ್ನು ಅರ್ಥ ಮಾಡಿಕೊಂಡವಳೇ ನಿವೇದಿತಾ. ಅವಳು ತುಂಬಾ ಧೈರ್ಯವಂತೆ” ಎಂದು ಜ್ಯೋತಿರಾಜ್ ಭಾವುಕರಾಗುತ್ತಾರೆ.

ಆಗಸ್ಟ್ 22-23ಕ್ಕೆ ವೈಭವ ಗಾರ್ಡನ್ ನಲ್ಲಿ ಕಲ್ಯಾಣ

ಬರುವ ಆಗಸ್ಟ್ 22 ಹಾಗೂ 23ರಂದು ಚಿತ್ರದುರ್ಗದ ‘ವೈಭವ ಗಾರ್ಡನ್’ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಆರಂಭದಲ್ಲಿ ಕೇವಲ 500 ಜನರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಲು ಜ್ಯೋತಿರಾಜ್ ಅಂದುಕೊಂಡಿದ್ದರು. ಆದರೆ, ಅವರ ಅಭಿಮಾನಿಗಳು, ಸ್ನೇಹಿತರು ಹಾಗೂ ಚಿತ್ರದುರ್ಗದ ಜನರ ಪ್ರೀತಿಯಿಂದಾಗಿ ಈಗ ಸುಮಾರು 6 ರಿಂದ 7 ಸಾವಿರ ಜನ ಸೇರುವ ನಿರೀಕ್ಷೆ ಇದೆ.
ಮದುವೆಗೆ ಸ್ವಿಡ್ಜರ್ಲ್ಯಾಂಡ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರವೀಣ್ ಸಿ.ಎಂ, ಸ್ಥಳೀಯ ಶಾಸಕ ವೀರೇಂದ್ರ ಪಪ್ಪಿ, ಮಾಜಿ ಶಾಸಕ ಚಂದ್ರಪ್ಪ, ಆಂಜನೇಯಪ್ಪ ಸೇರಿದಂತೆ ಹಲವು ಗಣ್ಯರು ಬೆಂಬಲ ನೀಡಿದ್ದಾರೆ. ಕಲ್ಯಾಣ ಮಂಟಪದ ಮಾಲೀಕರು ಕೂಡ ರಿಯಾಯಿತಿ ದರದಲ್ಲಿ ಮಂಟಪ ನೀಡಿದ್ದು, ದುರ್ಗದ ಜನತೆ ತಮ್ಮ ಕೈಲಾದ ಮಟ್ಟಿಗೆ ಅಕ್ಕಿ, ಬೇಳೆ ನೀಡಿ ಮದುವೆಗೆ ಸಾಥ್ ನೀಡುತ್ತಿದ್ದಾರೆ. ಚಿತ್ರರಂಗದಿಂದ ನಟ ಪ್ರೇಮ್ ಹಾಗೂ ಚಾಮರಾಜ್ ಮಾಸ್ಟರ್ ಸೇರಿದಂತೆ ‘ರಿಯಲ್ ಫೈಟರ್’ ಚಿತ್ರತಂಡ ಕೂಡ ಆಗಮಿಸುವ ಸಾಧ್ಯತೆ ಇದೆ.

ಇನ್ಮುಂದೆ ಸೇಫ್ಟಿ ಇಲ್ಲದೆ ಬಂಡೆ ಹತ್ತುವುದಿಲ್ಲ!

“ಇಷ್ಟು ದಿನ ನಾನೊಬ್ಬನೇ ಇದ್ದೆ, ನನಗೇನಾದರೂ ಕೇಳುವವರಿರಲಿಲ್ಲ. ಆದರೆ, ಈಗ ನನ್ನನ್ನು ನಂಬಿ ಒಂದು ಜೀವ ಬರುತ್ತಿದೆ. ನಿವೇದಿತಾ ಕೂಡ ತನಗೆ ಗೊತ್ತಿಲ್ಲದಂತೆಯೇ ತನ್ನ ಸಣ್ಣ ಸಂಪಾದನೆಯಲ್ಲಿ ಹಣ ಕೂಡಿಟ್ಟು ಮದುವೆಗೆ ಸಹಾಯ ಮಾಡಿದ್ದಾಳೆ. ಇನ್ಮುಂದೆ ಯಾವುದೇ ಬಂಡೆ ಹತ್ತುವುದಿದ್ದರೂ, ರೆಸ್ಕ್ಯೂ ಕಾರ್ಯಾಚರಣೆಗೆ ಹೋಗುವುದಿದ್ದರೂ ಸೇಫ್ಟಿ ರೋಪ್ ಬಳಸಿಯೇ ಮಾಡುತ್ತೇನೆ. ಯಾವುದೇ ಸುರಕ್ಷತೆ ಇಲ್ಲದೆ ಅಪಾಯಕ್ಕೆ ಮುಂದಾಗುವುದಿಲ್ಲ” ಎಂದು ಜ್ಯೋತಿರಾಜ್ ಭರವಸೆ ನೀಡಿದ್ದಾರೆ. “ನನ್ನ ದುರ್ಗದ ಜನತೆ ಹಾಗೂ ಕನ್ನಡಿಗರು ಬಂದು ನಮಗೆ ಆಶೀರ್ವದಿಸಬೇಕು” ಎಂದು ಅವರು ಪ್ರೀತಿಯಿಂದ ಆಹ್ವಾನಿಸಿದ್ದಾರೆ. 
Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Leave a comment

Leave a Reply

Your email address will not be published. Required fields are marked *

Loading News...

More News

Related Articles

ಪವನ್ ಕಲ್ಯಾಣ್ ಜನ್ಮದಿನದ ವಿಶೇಷ: ಚಿತ್ರದುರ್ಗದಲ್ಲಿ 8 ಬಗೆಯ ವನ್ಯಜೀವಿಗಳನ್ನು ದತ್ತು ಪಡೆದ ಜನಸೇನಾ ಪಕ್ಷ

ಚಿತ್ರದುರ್ಗ: ಪ್ರಾಣಿಗಳ ಮೇಲಿನ ಕಾಳಜಿ ಕೇವಲ ಜನ್ಮದಿನದಂತಹ ವಿಶೇಷ ಸಂದರ್ಭಗಳ ಆಚರಣೆಗೆ ಸೀಮಿತವಾಗದೆ, ಅವುಗಳ ಸಂರಕ್ಷಣೆ...

ಚಿತ್ರದುರ್ಗ: ಸಾಧಕರಿಗೆ ಪ್ರತಿಷ್ಠಿತ ‘ಗೊರುಚ ದತ್ತಿ ಪ್ರಶಸ್ತಿ’ ಪ್ರದಾನ; ನಾಲ್ವರು ಗಣ್ಯರಿಗೆ ಗೌರವ

ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ...

ಚಿತ್ರದುರ್ಗ ನೀರಾವರಿ ಹೋರಾಟ: ‘ಮುಕ್ತವಿಚಾರ ವೇದಿಕೆ’ಯ ಭದ್ರಾ ಮೇಲ್ದಂಡೆ ಚಳವಳಿಯ ಇತಿಹಾಸ

ಬರಹ: ಗೌನಹಳ್ಳಿ ಗೋವಿಂದಪ್ಪ ಚಿತ್ರದುರ್ಗ: ಏಳುಸುತ್ತಿನಕೋಟೆಯ ಗತ್ತು ಇದೆ, ಕಲ್ಲಿನ ಗೋಡೆಗಳಲ್ಲಿ ಅಡಗಿರುವ ರಣ ಕಲಾವಿದರ...

ಚಿತ್ರದುರ್ಗದ ಮೂರು ತಾಲ್ಲೂಕುಗಳು ಶೀಘ್ರವೇ ಬರ ಪಟ್ಟಿಗೆ ಸೇರ್ಪಡೆ: ಸಚಿವ ಟಿ.ರಘುಮೂರ್ತಿ ಸ್ಪಷ್ಟನೆ

ಚಿತ್ರದುರ್ಗ (Chitradurga Live News): ಜಿಲ್ಲೆಯ ಬಿಟ್ಟುಹೋಗಿರುವ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಮುಂದಿನ...