Home ಚಿತ್ರದುರ್ಗ ಚಿತ್ರದುರ್ಗ ನೀರಾವರಿ ಹೋರಾಟ: ‘ಮುಕ್ತವಿಚಾರ ವೇದಿಕೆ’ಯ ಭದ್ರಾ ಮೇಲ್ದಂಡೆ ಚಳವಳಿಯ ಇತಿಹಾಸ
ಚಿತ್ರದುರ್ಗ

ಚಿತ್ರದುರ್ಗ ನೀರಾವರಿ ಹೋರಾಟ: ‘ಮುಕ್ತವಿಚಾರ ವೇದಿಕೆ’ಯ ಭದ್ರಾ ಮೇಲ್ದಂಡೆ ಚಳವಳಿಯ ಇತಿಹಾಸ

Share
Share
ಬರಹ: ಗೌನಹಳ್ಳಿ ಗೋವಿಂದಪ್ಪ

ಚಿತ್ರದುರ್ಗ: ಏಳುಸುತ್ತಿನಕೋಟೆಯ ಗತ್ತು ಇದೆ, ಕಲ್ಲಿನ ಗೋಡೆಗಳಲ್ಲಿ ಅಡಗಿರುವ ರಣ ಕಲಾವಿದರ ಶೌರ್ಯರ ಕತೆಗಳಿವೆ. ಕಿವಿಯಲ್ಲಿ ಮಾರ್ಧನಿಸುವ ಜನಪದ ಹಾಡುಗಳು, ತತ್ವಪದಗಳ ಧ್ವನಿಯಿದೆ. ಪ್ರವಾಸಿಗರು ಬಂದು ಕಲ್ಲಿನ ಸೌಂದರ್ಯವನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿದು ಹೊಗಳಿ ಹೋಗುತ್ತಾರೆ. ಆದರೆ, ಈ ಐತಿಹಾಸಿಕ ಕೋಟೆಯ ನೆರಳಲ್ಲಿ ಬದುಕುತ್ತಿರುವ ದುರ್ಗದ ಬರೀ ಗಣ್ಣಿಗೆ ಕಾಣದ ಸತ್ಯವೊಂದಿದೆ. ಅದುವೇ ಬರಡು ಬದುಕು. ಚರಿತ್ರೆಯಲ್ಲಿ ಖ್ಯಾತಿ ಹೊಂದಿರುವ ಈ ನೆಲೆ ವರ್ತಮಾನದಲ್ಲಿ ಮಾತ್ರ ಕೇವಲ ಬರಡುಸೀಮೆ ಎಂಬ ಹಣೆಪಟ್ಟಿಗೆ ಸೀಮಿತವಾಗಿದೆ.

ಜಿಲ್ಲೆಯಲ್ಲಿ ಕೈಗಾರಿಕೆಗಳು ಇಲ್ಲ, ಬೃಹತ್ ಸಂಸ್ಥೆಗಳು ಇಲ್ಲ, ಬರೀ ಮಳೆಯನ್ನೇ ನಂಬಿ ದಿನದೂಡುವ ರೈತನ ಮೊಗದಲ್ಲಿ ಪ್ರತಿಯೊಂದು ಋತುವಿನಲ್ಲೂ ನಿರಾಸೆ ಗೆರೆಗಳೇ. ಇಂತಹ ವಾತಾವರಣದಲ್ಲಿ ಮಧ್ಯೆಯಿದ್ದ ಪತ್ರಕರ್ತರು, ಸಮಾನ ಮನಸ್ಕರ ಗುಂಪು ಸೇರಿ ಮುಕ್ತವಿಚಾರ ವೇದಿಕೆಯನ್ನು ಆರಂಭಿಸುತ್ತಾರೆ. ಆರಂಭಕ್ಕೆ ಸಂಚಾಲಕ ನರೇನಹಳ್ಳಿ ಅರುಣ್ಕುಮಾರ್, ಸಹ ಸಂಚಾಲಕರಾಗಿ ಮೆ.ನಾ.ಅಹೋಬಳಪತಿ ಕಾರ್ಯನಿರ್ವಹಿಸುತ್ತಾರೆ. ಇದರ ಹಿಂದೆ ದೊಡ್ಡ ಗುಂಪೊಂದು ಕೆಲಸ ಮಾಡುತ್ತದೆ.

ಮುಕ್ತವಿಚಾರ ವೇದಿಕೆ ಚರ್ಚೆಗಳಿಗಷ್ಟೇ ವೇದಿಕೆಯಾಗದೆ ಹೋರಾಟಕ್ಕೆ ಧ್ವನಿಯಾಯಿತು. ಪತ್ರಕರ್ತರಾಗಿ ನಾವು ಬರೀ ಲೇಖನಿ ಹಿಡಿದು ಕುಳಿತರೇ ಈ ನೆಲದ ಧಾಹ ತಣಿಸುವುದಿಲ್ಲವೆಂಬ ಸತ್ಯವನ್ನರಿತು, ಚಿತ್ರದುರ್ಗ ಜಿಲ್ಲಾ ನೀರಾವರಿ ಹಾಗೂ ಸಂಪನ್ಮೂಲ ಹೋರಾಟ ಸಮಿತಿ ಸಂಘಟಿಸುವ ಧ್ಯೇಯ ಒಕ್ಕೊರಲಿನ ಧ್ವನಿಯಾಯಿತು.

ಮುಕ್ತವಿಚಾರ ವೇದಿಕೆಯನ್ನು 1996ರಲ್ಲಿ ಆರಂಭಿಸಲಾಯಿತು. ಆ ಸಂದರ್ಭದಲ್ಲಿ ವಿಚಾರಗೋಷ್ಠಿಗಳು, ಸಂವಾದಗಳು ಏರ್ಪಡಿಸಿಕೊಂಡು ಬರುವಾಗಲೇ 1997ರಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹಾಗೂ ಸಂಪನ್ಮೂಲ ಹೋರಾಟ ಸಮಿತಿಯನ್ನು ಆರಂಭಿಸುವ ದೃಢ ಸಂಕಲ್ಪದೊಂದಿಗೆ ಸಂಘಟನೆ ಕಟ್ಟುತ್ತಾರೆ. 1997ರಲ್ಲಿ ಗುರುಭವನದಲ್ಲಿ ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬರುತ್ತದೆ. ಆ ವೇಳೆ ವಿವಿಧ ವಿಭಾಗಗಳನ್ನು ಒಳಗೊಂಡು ಹೋರಾಟಕ್ಕೆ ಹೆಜ್ಜೆ ಇಡುವ ಸಂಕಲ್ಪ ಮಾಡಲಾಗುತ್ತದೆ.

ಆರಂಭಿಕ ಸಮಿತಿಯ ಸ್ವರೂಪ

ಶ್ರೀ ಶಿವಮೂರ್ತಿ ಮುರುಘ ಶರಣರು

ಶ್ರೀ ಶಿವಮೂರ್ತಿ ಮುರುಘಾ ಶರಣರು

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಶ್ರೀ ಶಿವಾಲಿಂಗಾನಂದ ಸ್ವಾಮೀಜಿ

ಶ್ರೀ ಶಿವಾಲಿಂಗಾನಂದ ಸ್ವಾಮೀಜಿ

(ಹಾಗೂ ಮಲ್ಲಾಡಿಹಳ್ಳಿಯ ಶ್ರೀ ಸೂರದಾಸ್ ಜೀ.)

ಗೌರವಾಧ್ಯಕ್ಷರು: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ.

ಅಧ್ಯಕ್ಷರು: ಹಿರಿಯ ಮುತ್ಸದ್ಧಿ ಹೆಚ್. ಹನುಮಂತಪ್ಪ.

ಅಧ್ಯಕ್ಷೀಯ ಮಂಡಳಿ: ಪಿ.ಕೋದಂಡರಾಮಯ, ಹೆಚ್.ಏಕಾಂತಯ್ಯ, ಜಿ.ಎಚ್.ತಿಪ್ಪಾರೆಡ್ಡಿ, ಸಿ.ಪಿ.ಮೂಡಲಗಿರಿಯಪ್ಪ, ಎಂ.ಗೋಪಾಲ್, ಚಳ್ಳಕೆರೆ ಶಿವಶಂಕರಪ್ಪ, ಜಿ.ಮಲ್ಲಿಕಾರ್ಜುನಪ್ಪ, ಬಿ.ಟಿ.ಚನ್ನಬಸಪ್ಪ, ಜಿ.ಎಸ್.ಅಶ್ವತ್ ರೆಡ್ಡಿ, ಮುರುಘ ರಾಜೇಂದ್ರ ಒಡೆಯರ್, ಜಿ.ಶಿವಪ್ಪ, ಎಸ್.ಕೆ.ಬಸವರಾಜನ್, ಬಿ.ಎ.ಲಿಂಗಾರೆಡ್ಡಿ, ಶಿವಯೋಗಿಸ್ವಾಮಿ, ಎನ್.ವೈ.ಗೋಪಾಲಕೃಷ್ಣ, ಜಿ.ಚಂದ್ರಪ್ಪ, ಕೆ.ಶಿವಮೂರ್ತಿನಾಯ್ಕ, ಎ.ವಿ.ಉಮಾಪತಿ, ಎಚ್.ಬಿ.ಹನುಮಪ್ಪ, ಎಂ.ಚಂದ್ರಪ್ಪ, ಸಿ.ಕೆ.ಜಾಫರ್ ಷರೀಫ್, ಎಂ.ಗಂಗಾಧರಯ್ಯ, ಸಿ.ಟಿ.ಕೃಷ್ಣಮೂರ್ತಿ. ಪ್ರಧಾನ ಸಂಚಾಲಕ- ಬಂಜಗೆರೆ ಜಯಪ್ರಕಾಶ್.

ಉಪಾಧ್ಯಕ್ಷರು: ಜಿ.ತಾರಾನಾಥ್, ಎಂ.ಪಿ.ಗುರುರಾಜ್, ಎಸ್.ಸಿ.ರಾಜು, ಕೊಂಚೆ ಜಯದೇವಪ್ಪ, ಎಸ್.ಎಂ.ಸದಾನಂದಯ್ಯ, ಕೆ.ಆರ್.ರಾಜು, ಕೆ.ಆರ್.ನಾರಪ್ಪ, ತಿಪ್ಪೇಸ್ವಾಮಿ ಜಗಳೂರು, ಪಿ.ಎಸ್.ಜಯಪ್ಪ, ರಾಮಚಂದ್ರಪ್ಪ, ಅಜ್ಜಣ್ಣ, ಶಂಕರಪ್ಪ ನುಲೇನೂರು, ಜಿ.ಎಸ್.ಮಂಜುನಾಥ್, ಕೆ.ಪಾಲಯ್ಯ, ಬಿ.ಜಿ.ಶ್ರೀನಿವಾಸ್, ಡಿ.ಬಿ.ರಾಜು, ಎಚ್.ಲಕ್ಷ್ಮಣ್, ಜಿ.ಎಸ್.ಮಂಜುನಾಥ್, ಪಿ.ಎಂ.ಚಂದ್ರಶೇಖರ್, ಎನ್.ಮಂಜಪ್ಪ ಶೂದ್ರ, ಜಿ.ಎಂ.ಸಣ್ಣತಮ್ಮಣ್ಣ, ನಾರಾಯಣಮೂರ್ತಿ, ಲಕ್ಷ್ಮೀಕಾಂತರೆಡ್ಡಿ, ರಾಮಲಿಂಗಾಶೆಟ್ಟಿ, ಟಿ.ಜಗದಾಂಬಾ.

ಕಾರ್ಯದರ್ಶಿ ಮಂಡಳಿ: ಬೇಡರರೆಡ್ಡಿಹಳ್ಳಿ ಬಸವರೆಡ್ಡಿ, ಸಿ.ವೈ.ಶಿವರುದ್ರಪ್ಪ, ಬಂಡೆಬೊಮ್ಮನಹಳ್ಳಿ ನಾಗರಾಜ್, ಡಿ.ಎನ್.ಮೈಲಾರಪ್ಪ, ಗುತ್ತಿನಾಡು ಮಲ್ಲಪ್ಪ, ಮಾಡನಾಯಕನಹಳ್ಳಿ ರಂಗಪ್ಪ, ಎನ್.ಜಿ.ನರಸಿಂಹಸ್ವಾಮಿ, ಕೊಟ್ರಸ್ವಾಮಿ ಸಾರಂಗಂಠ, ಪಿ.ಜೆ.ತಿಪ್ಪೇಸ್ವಾಮಿ, ಆರ್.ಬಸವರಾಜಪ್ಪ. ಸಹ ಸಂಚಾಲಕ-ಕಾರ್ಯದರ್ಶಿ ಮಂಡಳಿ- ಚಿಕ್ಕಪ್ಪನಹಳ್ಳಿ ಷಣ್ಮುಖ.

ಹೋರಾಟ ಸಮಿತಿ: ಆರ್.ಎಚ್.ಮಹದೇವಪ್ಪ, ಕೆ.ಪಿ.ಭೂತಯ್ಯ, ಬೀರೇನಹಳ್ಳಿ ರಾಮಯ್ಯ, ಬಸವರಾಜ್ ಮಂಡಿಮಠ, ಕೆ.ತಿಪ್ಪೇಸ್ವಾಮಿ, ಎನ್.ಮಂಜುನಾಥ್, ಆರ್.ಶೇಷಣ್ಣಕುಮಾರ್, ಈ.ಚಂದ್ರಶೇಖರ್ ಟೋಲಿ, ರಫೀದ್ ಸಾಬ್, ಪಿ.ಎಸ್.ಪರ್ವತಪ್ಪ, ಎಸ್.ಸಿದ್ದೇಶ್ ಯಾದವ್, ಮುತ್ತಣ್ಣ, ಜಿ.ಎಸ್.ಕುಮಾರಗೌಡ, ತಿಪ್ಪೇಸ್ವಾಮಿ, ಮಹಾಲಿಂಗಪ್ಪ, ಎಚ್.ಮಹಾಂತೇಶ್, ಬಿ. ಕಾಂತರಾಜ್, ಜಮೀರ್ ಅಹಮದ್, ರಾಮಲಿಂಗಾರೆಡ್ಡಿ, ಯಳನಾಡು ತಿಪ್ಪೇಸ್ವಾಮಿ, ಲಲಿತಮ್ಮ, ನರಸಿಂಹಮೂರ್ತಿ, ಅಜ್ಜಪ್ಪ ಕೊಳಾಳ್, ಸಿರಿಗೆರೆ ಚಿಕ್ಕೇಶ್, ಪರಮೇಶಿ, ಎನ್.ಇ.ನಾಗರಾಜ್, ಗೋಪಿನಾಥ್, ಜಿ.ಟಿ.ಟಿಪ್ಪುಸುಲ್ತಾನ್, ಶಬೀರ್ ಅಹಮ್ಮದ್. ಸಂಚಾಲಕರು ಹೋರಾಟ ಸಮಿತಿ-ನರೇನಹಳ್ಳಿ ಅರುಣ್ಕುಮಾರ್.

ಸಂಚಾಲನ ಮಂಡಳಿ: ಜಿ.ಎಸ್.ರಘುನಾಥ್, ಲಕ್ಷ್ಮಮ್ಮ, ಹೆಚ್.ಮಂಜಪ್ಪ, ಸುಮಾ, ಸೌಭಾಗ್ಯಾ ಬಸವರಾಜನ್, ಯಶೋಧಮ್ಮ ಬಾಂಡ್ ತಿಪ್ಪೇಸ್ವಾಮಿ, ಕೆ.ಟಿ.ಕೇಶವಮೂರ್ತಿ, ಉಮಾದೇವಿ ರಾಜು, ಓಬಣ್ಣ, ಸಿ.ಎಂ.ಜಯಪ್ರಕಾಶ್, ಪುಟ್ಟಬಾಯಿ ನಾಯ್ಕ್, ಗೌರಮ್ಮ, ಯಶೋಧಮ್ಮ, ಅನಸೂಯಮ್ಮ, ಮಂಜುಳಮ್ಮ, ಪಾಲವ್ವನಹಳ್ಳಿ ಪ್ರಸನ್ನಕುಮಾರ್. ಸಂಚಾಲನ ಮಂಡಳಿ ಸಂಚಾಲಕ-ಜಿ.ಎಸ್.ಉಜ್ಜನಪ್ಪ.

ಸಾಂಸ್ಕೃತಿಕ ಹಾಗೂ ಪ್ರಚಾರ ಸಮಿತಿ: ಚಳ್ಳಕೆರೆ ಯರ್ರಿಸ್ವಾಮಿ, ಜಿ.ಎಂ.ಶಂಕರಮೂರ್ತಿ, ಕಂಪಾಲಿ ತಿಪ್ಪೇಸ್ವಾಮಿ, ಕುಮಾರ್, ಎಸ್.ಜಿ.ಬಾಲಕೃಷ್ಣ, ಕೆ.ಆರ್.ಧನಂಜಯಕುಮಾರ್, ತಿಪ್ಪೇಸ್ವಾಮಿ, ರಚನಾ ನಾಟಕ ಮಂಡಳಿ ತಿಪ್ಪೇಸ್ವಾಮಿ, ಮಹೇಶ್, ಶ್ಯಾಂಪ್ರಸಾದ್, ಮಂಜುನಾಥ್. ಸಂಚಾಲಕರು-ಚಳ್ಳಕೆರೆ ಬಸವರಾಜ್.

ಸಾರ್ವಜನಿಕ ಸಂಪರ್ಕ ಹಾಗೂ ಪ್ರಸಾರ ಮಾಧ್ಯಮ: ಚಂದ್ರಶೇಖರ ಬೆಳಗೆರೆ, ಪುರಂದರ ಲೋಕಿಕೇರೆ, ಬಿ.ಪಿ.ಸುಭಾಸ್, ಟಿ.ಎನ್.ಷಣ್ಮುಖ, ಡಿ.ಕೃಷ್ಣಮೂರ್ತಿ, ವಾಣಿ ರಾಮರಾವ್, ಎನ್.ಜಿ.ಹಳ್ಳಿ ಕೃಷ್ಣಮೂರ್ತಿ, ಮಂಜುನಾಥ್ ಸಮಗ್ರ ಸುದ್ದಿ, ಬಂಜಗೆರೆ ವಿಶ್ವನಾಥ್, ಎಂ.ರಾಜಕುಮಾರ್, ಆರ್.ಮರುಳಸಿದ್ದಪ್ಪ, ಗುರುಮೂರ್ತಿ, ರಾಮಸ್ವಾಮಿ, ಕೃಷ್ಣಪ್ಪ. ಸಂಚಾಲಕ-ದೊಣ್ಣೆಹಳ್ಳಿ ಗುರುಮೂರ್ತಿ.

ಚಳವಳಿಯ ಹಾದಿ ಮತ್ತು ತೀವ್ರತೆ

ಜಿಲ್ಲೆಯ ನೀರಾವರಿ ಹೋರಾಟಕ್ಕಾಗಿ ಜಿಲ್ಲೆಯ ರಾಜಕಾರಣಿಗಳು, ಹೋರಾಟಗಾರರು, ಪತ್ರಕರ್ತರು, ಉದ್ಯಮಿಗಳು ಹೀಗೆ ಎಲ್ಲ ಕ್ಷೇತ್ರದ ಪ್ರಮುಖರನ್ನು ಒಳಗೊಂಡ ಬೃಹತ್ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಯಿತು. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಎಲ್ಲ ಸಂಘ-ಸಂಸ್ಥೆ, ವಿವಿಧ ಕ್ಷೇತ್ರದ ಪ್ರಮುಖರನ್ನು ಒಳಗೊಂಡ ಚಿತ್ರದುರ್ಗ ಜಿಲ್ಲಾ ನೀರಾವರಿ ಮತ್ತು ಸಂಪನ್ಮೂಲ ಅಭಿವೃದ್ಧಿ ಹೋರಾಟ ಸಮಿತಿ 1997ರಲ್ಲಿ ಅಸ್ಥಿತ್ವಕ್ಕೆ ಬಂದಿತು. ಆಗ ಎಚ್.ಹನುಮಂತಪ್ಪ ಅಧ್ಯಕ್ಷರಾಗಿ ಹೋರಾಟವನ್ನು ಮುನ್ನಡೆಸಿದರು.

ಬಳಿಕ ಪಿ.ಕೋದಂಡರಾಮಯ್ಯ ಅಧ್ಯಕ್ಷರಾದ ವೇಳೆ ಹೋರಾಟ ತೀವ್ರತೆ ಪಡೆದುಕೊಂಡಿತು. ಈ ವೇಳೆ ಚಿತ್ರದುರ್ಗ ಜಿಲ್ಲಾ ನೀರಾವರಿ ಮತ್ತು ಸಂಪನ್ಮೂಲ ಅಭಿವೃದ್ಧಿ ಹೋರಾಟ ಸಮಿತಿ, ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯಾಗಿ ಜನರ ಬಾಯಲ್ಲಿ ಹೆಚ್ಚು ಹರಿದಾಡಿತು.

ಜಾಥಾ, ಸಮಾವೇಶ

ಎಚ್.ಹನುಮಂತಪ್ಪ ಅಧ್ಯಕ್ಷತೆಯಲ್ಲಿ ರಾಂಪುರದಲ್ಲಿ ಜಾಥಾ ಆರಂಭಿಸಿ, ಜಿಲ್ಲಾದ್ಯಂತ ಸಂಚರಿಸಿತ್ತು. ಜನ ಸಂಘಟನೆ ಬಳಿಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಮಾವೇಶ ನಡೆಸಲಾಗಿತ್ತು. ಅಂದಿನ ಸಭೆಗೆ ಶ್ರೀ ಶಿವಮೂರ್ತಿ ಮುರುಘ ಶರಣರು ಸಾನ್ನಿಧ್ಯ ವಹಿಸಿದ್ದರು. ವಿವಿಧ ಪಕ್ಷದ ಪ್ರಮುಖರು, ಜನಪ್ರತಿನಿಧಿಗಳು ಬೆಂಬಲವಾಗಿ ನಿಂತು ಸಮಾವೇಶ ಯಶಸ್ವಿಗೊಳಿಸುವ ಮೂಲಕ ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಲಾಯಿತು.

ಪಿ.ಕೋದಂಡರಾಮಯ್ಯ

ಚಳವಳಿ ತೀವ್ರತೆ

ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಜಿಲ್ಲಾದ್ಯಂತ ರಸ್ತೆ ತಡೆ, ಬಂದ್, ಪ್ರತಿಭಟನೆ, ಧರಣಿ, ಬಂಧನ-ಬಿಡುಗಡೆ, ವಿಧಾನಸೌಧದಲ್ಲಿ ಸಚಿವರು, ಮುಖ್ಯಮಂತ್ರಿಯೊಂದಿಗೆ ಸಭೆ ಹೀಗೆ ವಿವಿಧ ಹಂತದ ಮೂಲಕ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು.

ಎಂ.ಜಯಣ್ಣ
ಮುರುಘ ರಾಜೇಂದ್ರ ಒಡೆಯರ್

ಸರಣಿ ಧರಣಿ

ದಸಂಸ ರಾಜ್ಯ ನಾಯಕರಾಗಿದ್ದ ಎಂ.ಜಯಣ್ಣ ಅಧ್ಯಕ್ಷರೂ, ಮುರುಘ ರಾಜೇಂದ್ರ ಒಡೆಯರ್ ಕಾರ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕೋದಂಡರಾಮಯ್ಯ ಅವಧಿಯ ಚಳವಳಿಯ ಬಿಸಿ ಕಾಯ್ದುಟ್ಟುಕೊಳ್ಳುವ ಕೆಲಸ ಆಯ್ತು. ಮುಖ್ಯವಾಗಿ ಒನಕೆ ಓಬವ್ವ ವೃತ್ತದಲ್ಲಿ ವಿವಿಧ ಸಮುದಾಯ, ಸಂಘಟನೆಗಳು ಪ್ರತಿದಿನ ಧರಣಿ ಕೈಗೊಳ್ಳುವಂತೆ ಮಾಡಿದ್ದು ವಿಶೇಷ. 45 ದಿನಕ್ಕೂ ಹೆಚ್ಚು ಸರಣಿ ಧರಣಿ ಮೂಲಕ ಅಂದಿನ ಸರ್ಕಾರದ ಗಮನಸೆಳೆದಿದ್ದು ವಿಶೇಷ.

ಹೋರಾಟದ ರೂವಾರಿಗಳ ನುಡಿ

ಡಾ. ಬಂಜಗೆರೆ ಜಯಪ್ರಕಾಶ್

ಹೋರಾಟದ ಅನುಭವ ಧಾರೆ

“ಜಿಲ್ಲೆಯ ಜನ ಮಳೆ ಮತ್ತು ಬೆಳೆ ಇಲ್ಲದೆ ಜಿಲ್ಲೆ ಬರಡಾಗುವ ಸ್ಥಿತಿ ಕಣ್ಣಾರೆ ಕಂಡೇ. ಮೈಸೂರು, ಶಿವಮೊಗ್ಗ, ಬೀದರ್, ಗುಲ್ಬರ್ಗ ಸೇರಿ ಅನೇಕ ಜಿಲ್ಲೆಗಳಲ್ಲಿ ಹೋರಾಟವನ್ನು ಸಂಘಟಿಸಿದ ನಾನು, ನನಗೆ ಜನ್ಮಕೊಟ್ಟ ನನ್ನ ಜಿಲ್ಲೆಯ ಜನರ ಪರವಾಗಿ ಏನಾದ್ರೂ ಮಾಡಬೇಕೆಂಬ ತುಡಿತ ಇತ್ತು. ಯಾವುದಾದರೂ ಜ್ವಲಂತ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟ ಕೈಗೊಳ್ಳಬೇಕೆಂಬುದು ಮನಸ್ಸಿನಲ್ಲಿತ್ತು. ಅದರ ಪರಿಣಾಮವೇ ನೀರಾವರಿ ಹೋರಾಟ ಸಮಿತಿ ರಚನೆ.”

ಡಾ. ಬಂಜಗೆರೆ ಜಯಪ್ರಕಾಶ್
ಪ್ರಧಾನ ಸಂಚಾಲಕ, ನೀರಾವರಿ ಹೋರಾಟ ಸಮಿತಿ

ಚಳ್ಳಕೆರೆ ಬಸವರಾಜ್

ಶಾಂತಿ ಮಾರ್ಗದ ಹಾದಿ

“ಜೈಲಿಗೆ ಹೋಗದೆ, ಪ್ರಾಣ ತ್ಯಾಗ ಮಾಡದೆ ಕೇವಲ ವೈಚಾರಿಕ ಜಾಗೃತಿ ಮತ್ತು ನಿರಂತರ ಅಧ್ಯಯನದ ಮೂಲಕವೇ ಪ್ರತಿಭಟನೆ, ಸಮಾವೇಶ, ಧರಣಿ, ರಸ್ತೆ ತಡೆ, ಸಭೆಗಳ ಮೂಲಕ ಸರ್ಕಾರದ ಕಣ್ಣು ತೆರೆಸುವಲ್ಲಿ ಹೋರಾಟ ಸಮಿತಿ ಹಾದಿ ಮಾದರಿ ಆಗಿದೆ. ಚಿತ್ರದುರ್ಗ ಜಿಲ್ಲೆಯ ನೀರಾವರಿ ಹೋರಾಟ ಮುಕ್ತವಿಚಾರ ವೇದಿಕೆ ಹಿನ್ನೆಲೆಯಲ್ಲಿಯೇ ಆರಂಭವಾಯಿತು. ಇಡೀ ಹೋರಾಟವನ್ನೇ ಪತ್ರಕರ್ತರು, ವೇದಿಕೆ ಪ್ರಮುಖರು ಮುನ್ನಡೆಸಿದ್ದು ವಿಶೇಷ.”

ಚಳ್ಳಕೆರೆ ಬಸವರಾಜ್
ಸಂಚಾಲಕ, ನೀರಾವರಿ ಹೋರಾಟ ಸಮಿತಿ

ನರೇನಹಳ್ಳಿ ಅರುಣ್ಕುಮಾರ್

ಜ್ವಲಂತ ಸಮಸ್ಯೆಗಳ ಚರ್ಚೆಗೆ ವೇದಿಕೆ

ವೈಜ್ಞಾನಿಕ, ಜನಪರ ಹೋರಾಟಗಳಲ್ಲಿ ಪಾಲ್ಡೊಂಡಿದ್ದ ರಾಜ್ಯಮಟ್ಟದ ಚಿಂತಕರು, ಚಳವಳಿಗಾರರು, ಮಾನವೀಯ ಬದ್ಧತೆಯುಳ್ಳವರ ಚಿಂತನೆಯಡಿ ಹುಟ್ಟಿಕೊಂಡಿದ್ದೇ ಮುಕ್ತ ವಿಚಾರ ವೇದಿಕೆ.

ವೇದಿಕೆ ಮುನ್ನಡಿಸುತ್ತಿದ್ದ ಸ್ನೇಹಿತರು ಬಿಡುವಿನ ವೇಳೆ ಅನೌಪಚಾರಿಕ ಚರ್ಚೆಯಲ್ಲಿ ತೊಡಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಹೋರಾಟವನ್ನು ಏಕೆ ಕೈಗೆತ್ತಿಕೊಳ್ಳಬಾರದೆಂಬ ಅಭಿಪ್ರಾಯ ಚಿಗುರಿ, ಅದು ವೇದಿಕೆಯಲ್ಲಿ ಸಸಿಯಾಗಿ, ಚಿಕ್ಕಮಗಳೂರು, ಶಿವಮೊಗ್ಗದ ಮಲೆನಾಡು ಪ್ರದೇಶದಲ್ಲಿ ಬಂಜಗೆರೆ ಜಯಪ್ರಕಾಶ್ ನೇತೃತ್ವದಲ್ಲಿ ವೇದಿಕೆಯ ಪ್ರಮುಖರೆಲ್ಲಾ ಅಧ್ಯಯನ ನಡೆಸಿದೇವು. ಬಳಿಕ ಬಸವ ಮಂಟಪದಲ್ಲಿ ಪೂರ್ವಭಾವಿ ಸಭೆ, ನಂತರ ಗುರುಭವನದಲ್ಲಿ ಹೋರಾಟ ಸಮಿತಿ ರಚನೆ ಬಳಿಕ ಇಡೀ ಹೋರಾಟವನ್ನೇ ಮುಕ್ತವಿಚಾರ ವೇದಿಕೆ ಮುನ್ನಡಿಸಿತು.

ನಿರಂತರ ಮುನ್ನೆಡಸಿದ್ದರ ಫಲ ಯೋಜನೆ ಜಾರಿಗೊಂಡು, ಬಯಲುಸೀಮೆ ರೈತರ ಕನಸು ನನಸಾಗುವ ದಿನ ಸಮೀಪಿಸುತ್ತಿದೆ. ನೀರು ಹರಿಯುವ ದಿನಗಣನೆ ಆರಂಭವಾಗಿದೆ. ಇದೊಂದು ನಿಷ್ಕಲ್ಮಶ, ಶಾಂತಿಯುತ ಹೋರಾಟಕ್ಕೆ ದೊರೆತ ಜಯ.

ಹೋರಾಟಕ್ಕೆ ತೀವ್ರತೆ ತಂದುಕೊಡುವಲ್ಲಿ ಶ್ರಮಿಸಿದ ಈಗಲೂ ಚಳವಳಿಯ ಮುನ್ಸೂಚನೆಯಲ್ಲಿ ನಿಂತು, ಹೋರಾಟದ ಉತ್ಸಾಹದಲ್ಲಿ ಯುವಪೀಳಿಗೆ ನಾಚಿಸುವಂತಿರುವ 86 ವರ್ಷದ ಪಿ.ಕೋದಂಡರಾಮಯ್ಯ, ಕವಿ ಬಂಜಗೆರೆ ಜಯಪ್ರಕಾಶ್, ರೈತ ನಾಯಕ ಸೋಮುಗುದ್ದು ರಂಗಸ್ವಾಮಿ, ಈಚಘಟ್ಟ ಸಿದ್ದವೀರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಆರ್.ಶೇಷಣ್ಣಕುಮಾರ್, ದಗ್ಗೆ ಶಿವಪ್ರಕಾಶ್, ಪರಮೇಶ್ ಹಾಗೂ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿ ಅನೇಕ ಪಕ್ಷದ ಸದಸ್ಯರು, ಮುಖಂಡರು, ರೈತ, ಕಾರ್ಮಿಕ, ಕನ್ನಡಪರ ಸಂಘಟನೆ ನಾಯಕರುಗಳು ಈಗಲೂ ಹೋರಾಟದ ಬಿಸಿ ಕಾಯ್ದುಕೊಂಡಿರುವುದು ಮಾದರಿ.

ನರೇನಹಳ್ಳಿ ಅರುಣ್ಕುಮಾರ್
ಸಂಚಾಲಕ, ನೀರಾವರಿ ಹೋರಾಟ ಸಮಿತಿ

ಚಿಕ್ಕಪ್ಪನಹಳ್ಳಿ ಷಣ್ಮುಖ

ಹೋರಾಟಕ್ಕೆ ವೇದಿಕೆ

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಉದಯಿಸುವ ಪೂರ್ವದಲ್ಲಿ ಬಸವಮಂಟಪದಲ್ಲಿ ಸಭೆ ಆಯೋಜಿಸುವ, ಜಿಲ್ಲೆಯ ಪ್ರಮುಖರನ್ನು ಆಹ್ವಾನಿಸುವ ಹೊಣೆಗಾರಿಕೆಯನ್ನು ನರೇನಹಳ್ಳಿ ಅರುಣ್ಕುಮಾರ್, ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಬ್ಬರಿಗೆ ಮುಕ್ತವಿಚಾರ ವೇದಿಕೆ ಮುನ್ನಡೆಸುತ್ತಿದ್ದವರು ವಹಿಸಿದರು. ಕನ್ನಡಪ್ರಭ ಪತ್ರಿಕೆ ವರದಿಗಾರರಾಗಿದ್ದ ಚಿಕ್ಕಪ್ಪನಹಳ್ಳಿ ಷಣ್ಮುಖ ತನಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದರು. ಮಠಗಳು, ರಾಜಕಾರಣಿಗಳ ಮನೆಗಳಿಗೆ ಪತ್ರ ಬರೆದರು, ಕೆಲವರಿಗೆ ದೂರವಾಣಿ ಕರೆ ಮಾಡಿ ಆಹ್ವಾನಿಸುವ ಕೆಲಸವನ್ನು ಮಾಡಿದರು. ಒಟ್ಟಾರೆ ಪ್ರಮುಖರು ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿದರು.

ಕೆ.ಆರ್.ದಯಾನಂದ್

ಹೋರಾಟಕ್ಕೆ ಆರ್ಥಿಕ ಸಹಾಯ

“ರೂಪಾ ಕೊಲೆ ಪ್ರಕರಣದ ನಂತರ ಹೋರಾಟಕ್ಕಾಗಿ ಕರಪತ್ರಗಳ ಮುದ್ರಣಕ್ಕೆ ಸಹಾಯ ಕೋರಿ ಮುಕ್ತವಿಚಾರ ವೇದಿಕೆಯ ಚಿಕ್ಕಪ್ಪನಹಳ್ಳಿ ಷಣ್ಮುಖ, ನರೇನಹಳ್ಳಿ ಅರುಣ್ಕುಮಾರ್ ಇತರ ಪ್ರಮುಖರು, ಎಸ್ಕಾರ್ಟ್ ಟ್ಯಾಕ್ಟರ್ ಏಜೆನ್ಸಿ ಪಡೆದಿದ್ದ ನನ್ನ ಬಳಿ ಬಂದಾಗ, ಎಸ್ಕಾರ್ಟ್ ಕಂಪನಿಗೆ ಜಿಲ್ಲೆಯ ಕೃಷಿ ಮತ್ತು ಟ್ರ್ಯಾಕ್ಟರ್ಗಳ ಕುರಿತು ಅಧ್ಯಯನ ನಡೆಸಲಾಗಿತ್ತು. ಆ ಹಿನ್ನೆಲೆಯಲ್ಲಿ ಜಿಲ್ಲೆಗೆ ನೀರಾವರಿ ಸಂಬಂಧಿಸಿದ ಹೋರಾಟವನ್ನು ರೂಪಿಸಿದರೆ ನನ್ನ ಕಡೆಯಿಂದ ಆಗುವ ಸಹಾಯ ಮಾಡುತ್ತೇನೆಂದು ತಿಳಿಸಿದೆ. ಅದಾದ ನಂತರ ಜಿಲ್ಲೆಯಿಂದ ಪ್ರಥಮ ಬಾರಿಗೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿ ಪ್ರದೇಶದಲ್ಲಿ ಅಧ್ಯಯನಕ್ಕೆ ಹೊರಟ ತಂಡಕ್ಕೆ ವಾಹನ ವ್ಯವಸ್ಥೆ ಸೇರಿ ಎಲ್ಲ ಆರ್ಥಿಕ ಸಹಾಯವನ್ನು ನೀಡಿದೆ.”

ಕೆ.ಆರ್.ದಯಾನಂದ್
ಖಜಾಂಚಿ, ನೀರಾವರಿ ಹೋರಾಟ ಸಮಿತಿ

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Leave a comment

Leave a Reply

Your email address will not be published. Required fields are marked *

Loading News...

More News

Related Articles

ಚಿತ್ರದುರ್ಗ: ಸಾಧಕರಿಗೆ ಪ್ರತಿಷ್ಠಿತ ‘ಗೊರುಚ ದತ್ತಿ ಪ್ರಶಸ್ತಿ’ ಪ್ರದಾನ; ನಾಲ್ವರು ಗಣ್ಯರಿಗೆ ಗೌರವ

ಚಿತ್ರದುರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ...

ಚಿತ್ರದುರ್ಗದ ಮೂರು ತಾಲ್ಲೂಕುಗಳು ಶೀಘ್ರವೇ ಬರ ಪಟ್ಟಿಗೆ ಸೇರ್ಪಡೆ: ಸಚಿವ ಟಿ.ರಘುಮೂರ್ತಿ ಸ್ಪಷ್ಟನೆ

ಚಿತ್ರದುರ್ಗ (Chitradurga Live News): ಜಿಲ್ಲೆಯ ಬಿಟ್ಟುಹೋಗಿರುವ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕುಗಳು ಮುಂದಿನ...

ಕೋಟೆನಾಡಿಗೆ ಮತ್ತೊಂದು ಗರಿ: ಕುವೆಂಪು ಭಾಷಾ ಭಾರತಿ ಪ್ರಶಸ್ತಿಗೆ ಡಾ.ಬಂಜಗೆರೆ ಜಯಪ್ರಕಾಶ್ ಆಯ್ಕೆ

ಚಿತ್ರದುರ್ಗ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2026ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಚಿತ್ರದುರ್ಗದ ಹೆಮ್ಮೆಯ...

ಚಿತ್ರದುರ್ಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ರಮ್ಯಾ ಎಸ್. ನೇಮಕ; ಟಿ. ವೆಂಕಟೇಶ್ ವರ್ಗಾವಣೆ

ಚಿತ್ರದುರ್ಗ ಲೈವ್ ನ್ಯೂಸ್ (chitradurgalive.com) ಚಿತ್ರದುರ್ಗ: ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಮುಂದುವರಿಸಿದ್ದು,...