Home ಚಿತ್ರದುರ್ಗ ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವ: ಪತ್ರಿಕೋದ್ಯಮದ ದಿಗ್ಗಜರ ಹೆಜ್ಜೆಗುರುತು ಮೆಲುಕು ಹಾಕಿದ ಹಿರಿಯ ಪತ್ರಕರ್ತರು
ಚಿತ್ರದುರ್ಗಧಾರ್ಮಿಕ

ಚಿತ್ರದುರ್ಗ ಶರಣ ಸಂಸ್ಕೃತಿ ಉತ್ಸವ: ಪತ್ರಿಕೋದ್ಯಮದ ದಿಗ್ಗಜರ ಹೆಜ್ಜೆಗುರುತು ಮೆಲುಕು ಹಾಕಿದ ಹಿರಿಯ ಪತ್ರಕರ್ತರು

Share
Share

ಚಿತ್ರದುರ್ಗ: ಫ.ಗು.ಹಳಕಟ್ಟಿಯವರು ಹಿರಿಯ ಪತ್ರಕರ್ತರು. ಹಿಂದಿನ ಕಾಲದಲ್ಲಿ ಪತ್ರಿಕೋದ್ಯಮ ನಡೆಸುವುದೇ ಕಷ್ಟದ ಕೆಲಸ. ಆದರೆ ಅವರು ಅಂದಿನ ಕಾಲದಲ್ಲಿ 35 ವರ್ಷಗಳ ಕಾಲ ಶಿವಾನುಭವ ಪತ್ರಿಕೆ ನಡೆಸಿ, ಅದನ್ನು ರಕ್ಷಿಸಿದವರು. 250ಕ್ಕೂ ಹೆಚ್ಚು ವಚನಕಾರರ ವಚನಗಳನ್ನು ಸಂಗ್ರಹ ಮಾಡಿದ ಪುಣ್ಯದ ಕೆಲಸ ಮಾಡಿದವರು ಎಂದು ಸಂಯುಕ್ತ ಕರ್ನಾಟಕ ಸಂಪಾದಕರಾದ ಮಹಾಬಲ ಸೀತಾಳಭಾವಿ ಹೇಳಿದರು.

ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ಜನ್ಮ ಶತಮಾನೋತ್ಸವ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 80 ರಿಂದ 100 ವರ್ಷಗಳ ಹಿಂದೆ ಪುಸ್ತಕ ಪ್ರಕಟವಾಗುವುದು ಅಸಾಧ್ಯವಾಗಿತ್ತು. ಅಂತಹ ಸಂದರ್ಭದಲ್ಲಿ ಊರೂರು ಸುತ್ತಿ ಜೋಳಿಗೆ ಹಿಡಿದು ವಚನ ಸಂಗ್ರಹ ಮಾಡಿ ಮುದ್ರಣ ಮಾಡಿಸಿದ ಮಹಾನ್ ಚೇತನ ಅವರು ಎಂದು ಬಣ್ಣಿಸಿದರು.

ವೃತ್ತಿಯಲ್ಲಿ ವಕೀಲರು ಮತ್ತು ರಾಜಕಾರಣಿಯಾಗಿದ್ದರೂ, ಮುಂದಿನ ಪೀಳಿಗೆಗೆ ವಚನಗಳು ಸಿಗದೇ ಹೋಗಬಹುದು ಎಂಬ ಕಾಳಜಿಯಿಂದ ಅವುಗಳನ್ನು ಸಂಗ್ರಹಿಸಿದರು. ಅವರು ಪತ್ರಿಕೆಗಾಗಿ ಇಡೀ ಜೀವನದ ಆಸ್ತಿ, ಐಶ್ವರ್ಯವನ್ನೇ ಕಳೆದುಕೊಂಡವರು ಎಂದು ಹೇಳಿದರು.

ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಮೂಹ ಸಂಪಾದಕೀಯ ನಿರ್ದೇಶಕ ರವಿ ಹೆಗಡೆ, ಶಿಕ್ಷಕ ಕಲಿಸುತ್ತಾನೆ, ಗುರು ಸ್ಫೂರ್ತಿ ನೀಡುತ್ತಾರೆ. ಪತ್ರಿಕೋದ್ಯಮದ ನನ್ನ ಗುರುಗಳು ವೈ.ಎನ್. ಕೃಷ್ಣಮೂರ್ತಿಯವರು ಎಂದು ಹೇಳಿದರು.
ಅವರು ಪ್ರಶ್ನೆಗೆ ಪ್ರಶ್ನೆ ಹಾಕುತ್ತಿದ್ದರು, ಪತ್ರಿಕೋದ್ಯಮಕ್ಕೆ ಕೊಟ್ಟ ಕೊಡುಗೆ ಅಪಾರ. ಇಂದಿನ ಕೆಸರಿನಲ್ಲಿ ಕಮಲದಂತೆ ಪತ್ರಿಕೋದ್ಯಮ ನಡೆಸಲು ಮಾರ್ಗ ತೋರಿದವರು ವೈ.ಎನ್.ಕೆ ಎಂದು ನುಡಿದರು.

ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್ ಐನಕೈ ಮಾತನಾಡಿ, ಮೊಬೈಲ್, ಟಿವಿ, ಇಂಟರ್ನೆಟ್ ಇಲ್ಲದ ಕಾಲದಲ್ಲಿ ಸಾಧನೆ ಮಾಡಿದ ವ್ಯಕ್ತಿ ವೈ.ಎನ್.ಕೃಷ್ಣಮೂರ್ತಿಯವರು ಎಂದು ಹೇಳಿದರು.

ರಾಜ್ಯದ ಏಕೀಕರಣಕ್ಕೆ, ನೀರಾವರಿ ಯೋಜನೆಗಳಿಗೆ ಶ್ರಮಿಸಿದವರು ಎಸ್.ನಿಜಲಿಂಗಪ್ಪನವರು. ಅವರು ಗಾಂಧೀಜಿ ರಾಷ್ಟ್ರಪಿತರಾದರೆ, ರಾಜ್ಯದ ಪಿತೃ ಇದ್ದಂತೆ ಎಂದು ಬಣ್ಣಿಸಿದರು.

ಕನ್ನಡಪ್ರಭ ಸಂಪಾದಕರಾದ ಗಿರೀಶ್‌ರಾವ್ ಹತ್ವಾರ್ ಜೋಗಿ ಮಾತನಾಡಿ, ಜಿ.ಎಸ್.ಶಿವರುದ್ರಪ್ಪನವರು ಎದೆ ತುಂಬಿ ಹಾಡುವೆನು ಎಂಬ ಹಾಡಿನ ಮೂಲಕ ಜನಮಾನಸದಲ್ಲಿ ಉಳಿದವರು. ಬೆಳಕಿನ ಕವಿ ಅವರು ಎಂದರು.

ಬಿಜಾಪುರದಲ್ಲಿ ಸಿದ್ಧೇಶ್ವರ ಸಂಸ್ಥೆ ಕಟ್ಟಿದವರು ಫ.ಗು.ಹಳಕಟ್ಟಿಯವರು. 25,000 ವಚನಗಳನ್ನು ಪ್ರಚುರಪಡಿಸಿದವರು. ಬಸವಣ್ಣನವರನ್ನು ಕೇವಲ ಸಾಂಸ್ಕೃತಿಕ ನಾಯಕ ಎನ್ನದೆ, ಶೋಷಣೆಮುಕ್ತ ಸಮಾಜ ನಿರ್ಮಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

Author

Share

Loading News...

More News

Related Articles

ದಂಡ ವಸೂಲಿ ನಮ್ಮ ಉದ್ದೇಶವಲ್ಲ, ಜೀವ ರಕ್ಷಣೆ ನಮ್ಮ ಗುರಿ: ಚಿತ್ರದುರ್ಗ ಎಸ್ಪಿ ಕುಶಲ್ ಚೌಕ್ಸೆ

ಕೃಪೆ: ಡೆಕ್ಕನ್ ಹೆರಾಲ್ಡ್ (DH) / ನೃಪತುಂಗ ಎಸ್. ಕೆ. ಚಿತ್ರದುರ್ಗ: "ಸಂಚಾರ ನಿಯಮಗಳ ಜಾರಿ...

ಚಿತ್ರದುರ್ಗದಲ್ಲಿ ಅಕ್ಟೋಬರ್ 19 ರಂದು ರಾಜ್ಯ ಮಟ್ಟದ ವಿಕಲಚೇತನರ ಬೃಹತ್ ಸಮಾವೇಶ: 1 ಲಕ್ಷ ಸಹಿ ಸಂಗ್ರಹ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಮಹಾಂತೇಶ್ ಬ್ರಹ್ಮ ಕರೆ

ಚಿತ್ರದುರ್ಗ: ವಿಕಲಚೇತನರ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿ...

ಚಿತ್ರದುರ್ಗ: ಗಾಯತ್ರಿ ಜಲಾಶಯದಲ್ಲಿ ಅಕ್ರಮ ಮಣ್ಣು ಸಾಗಾಟ ಜಾಲದ ಮೇಲೆ ಪೊಲೀಸರ ಮಿಂಚಿನ ದಾಳಿ; 4 ಟಿಪ್ಪರ್, ಹಿಟಾಚಿ ವಾಹನಗಳು ಜಪ್ತಿ!

ಚಿತ್ರದುರ್ಗ (chitradurgalive.com): ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐತಿಹಾಸಿಕ ಗಾಯತ್ರಿ ಜಲಾಶಯದ ವ್ಯಾಪ್ತಿಯಲ್ಲಿ ಸರ್ಕಾರದ ಅನುಮತಿಯಿಲ್ಲದೆ...

ಚಿತ್ರದುರ್ಗ ಮುರುಘಾಮಠ: ಬದುಕಿಗೆ ದಾರಿದೀಪ ವಚನ ಸಾಹಿತ್ಯ; ಆಸೆಗೆ ಕಡಿವಾಣ, ಯೋಗದಿಂದ ನೆಮ್ಮದಿ

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠದಲ್ಲಿ ನಡೆಯುತ್ತಿರುವ 'ಶರಣ ಸಂಸ್ಕೃತಿ ಉತ್ಸವ'ವು ಬದುಕಿನ ಮೌಲ್ಯಗಳು, ಯೋಗದ ಮಹತ್ವ ಮತ್ತು...