Home ಹೊಸದುರ್ಗ ಹೊಸದುರ್ಗ ಮೂಲದ ದಕ್ಷ ಅಧಿಕಾರಿ ಟಿ. ಯೋಗೇಶ್‌ಗೆ ಪ್ರತಿಷ್ಠಿತ ‘ಸ್ಕೋಚ್ ಸ್ವರ್ಣ ಪ್ರಶಸ್ತಿ’
ಹೊಸದುರ್ಗ

ಹೊಸದುರ್ಗ ಮೂಲದ ದಕ್ಷ ಅಧಿಕಾರಿ ಟಿ. ಯೋಗೇಶ್‌ಗೆ ಪ್ರತಿಷ್ಠಿತ ‘ಸ್ಕೋಚ್ ಸ್ವರ್ಣ ಪ್ರಶಸ್ತಿ’

Share
ಹೊಸದುರ್ಗ : ನವದೆಹಲಿಯಲ್ಲಿ ಸ್ಕೋಚ್ ಸ್ವರ್ಣ ಪ್ರಶಸ್ತಿ ಸ್ವೀಕರಿಸುತ್ತಿರುವ ಅಧಿಕಾರಿ ಟಿ. ಯೋಗೇಶ್ (Officer T. Yogesh receiving Skoch Gold Award in New Delhi)
Share

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನವರಾದ ಹಾಗೂ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿರುವ ಹಿರಿಯ ಅಧಿಕಾರಿ ಟಿ. ಯೋಗೇಶ್ ಅವರಿಗೆ ಭಾರತದ ಅತ್ಯುನ್ನತ ಸ್ವತಂತ್ರ ಸಿವಿಲ್ ಗೌರವಗಳಲ್ಲಿ ಒಂದಾದ ಪ್ರತಿಷ್ಠಿತ ‘ಸ್ಕೋಚ್ ಪ್ರಶಸ್ತಿ’ ಲಭಿಸಿದೆ.

ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಕೈಗೊಂಡ ವಿನೂತನ ಕಾರ್ಯಕ್ರಮಗಳನ್ನು ಗುರುತಿಸಿ ಬುಡಕಟ್ಟು ಕಲ್ಯಾಣ ವಿಭಾಗದ ‘ಸ್ವರ್ಣ ಪ್ರಶಸ್ತಿ’ (Gold Award) ನೀಡಿ ಗೌರವಿಸಲಾಗಿದೆ.

ಸೆಪ್ಟೆಂಬರ್ 26ರ ಶನಿವಾರದಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಸಿಲ್ವರ್ ಓಕ್ ಹಾಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಯೋಗೇಶ್ ಅವರು ಈ ಪ್ರತಿಷ್ಠಿತ ಪುರಸ್ಕಾರವನ್ನು ಸ್ವೀಕರಿಸಿದರು.

ಸ್ಕೋಚ್ ಪ್ರಶಸ್ತಿಯ ಹಿನ್ನೆಲೆ: ಉತ್ತಮ ಆಡಳಿತ, ಡಿಜಿಟಲ್ ಇಂಡಿಯಾ, ಮೂಲಭೂತ ಸೌಕರ್ಯಗಳು, ಸಾಮಾಜಿಕ ಕಲ್ಯಾಣ ಹಾಗೂ ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಹಾಗೂ ನಾವೀನ್ಯತಾ ಸಾಧನೆ ತೋರುವ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ದಕ್ಷತೆಗೆ ಸಿಕ್ಕ ಮನ್ನಣೆ: ಈ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಸೇವೆ ಸಲ್ಲಿಸಿದ್ದ ಅವಧಿಯಲ್ಲಿ ಟಿ. ಯೋಗೇಶ್ ಅವರು ತಮ್ಮ ಜನಪರ ಹಾಗೂ ದಕ್ಷ ಆಡಳಿತದ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆಯಲ್ಲೂ ತಮ್ಮ ಕಾರ್ಯಕ್ಷಮತೆ ಮೆರೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಚಿತ್ರದುರ್ಗ ಜಿಲ್ಲೆಯ ಕೀರ್ತಿಯನ್ನು ಬೆಳಗಿದ್ದಾರೆ.

Author

Share

Loading News...

More News

Related Articles

ಬರ ಪರಿಹಾರ, ರಾಗಿ ಹಣ ಬಿಡುಗಡೆಗೆ ಆಗ್ರಹ: ಹೊಸದುರ್ಗದಲ್ಲಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆ

ಹೊಸದುರ್ಗ: ತಾಲ್ಲೂಕಿನಲ್ಲಿ ಆವರಿಸಿರುವ ಭೀಕರ ಬರಗಾಲಕ್ಕೆ ತಕ್ಷಣವೇ ಪರಿಹಾರ ಕಲ್ಪಿಸಬೇಕು ಹಾಗೂ ಬೆಂಬಲ ಬೆಲೆಯಡಿ ಖರೀದಿಸಿದ...

ರಂಗದ ಮೇಲೆ ಬರದ ಬದುಕಿನ ಮಾತು!: 6 ದಿನ, 6 ನಾಟಕ; ಸಾಣೇಹಳ್ಳಿ ರಂಗೋತ್ಸವಕ್ಕೆ ಸಜ್ಜು

ಹೊಸದುರ್ಗ: ರಂಗಭೂಮಿ, ವಿಚಾರ, ವಚನ ಸಂಗೀತ, ನೃತ್ಯ ಹಾಗೂ ಸಾಮಾಜಿಕ ಜಾಗೃತಿಯ ಸಂಗಮಕ್ಕೆ ಸಾಣೇಹಳ್ಳಿ ಮತ್ತೊಮ್ಮೆ...

ಸೆ. 24ರಂದು ಭದ್ರಾ ನಾಲೆಗೆ ಸಿಎಂ ಡಿಕೆ ಬಾಗಿನ | ಹೊಸದುರ್ಗದಿಂದ 100 ಬಸ್‌ಗಳ ವ್ಯವಸ್ಥೆ | ಶಾಸಕ ಬಿ.ಜಿ. ಗೋವಿಂದಪ್ಪ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್...

ಹೊಸದುರ್ಗ: ಭದ್ರಾ ಟ್ರಯಲ್ ರನ್ ವೇಳೆ ಕಾಲುವೆ ಒಡೆದ ಕಿಡಿಗೇಡಿಗಳು, ಅಪಾರ ನೀರು ಪೋಲು

ಹೊಸದುರ್ಗ: ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಇನ್ನೇನು ನಮ್ಮ ಕೆರೆಗಳಿಗೆ ಹರಿದು ಬರಲಿದೆ...