Home ಹೊಸದುರ್ಗ ರಂಗದ ಮೇಲೆ ಬರದ ಬದುಕಿನ ಮಾತು!: 6 ದಿನ, 6 ನಾಟಕ; ಸಾಣೇಹಳ್ಳಿ ರಂಗೋತ್ಸವಕ್ಕೆ ಸಜ್ಜು
ಹೊಸದುರ್ಗ

ರಂಗದ ಮೇಲೆ ಬರದ ಬದುಕಿನ ಮಾತು!: 6 ದಿನ, 6 ನಾಟಕ; ಸಾಣೇಹಳ್ಳಿ ರಂಗೋತ್ಸವಕ್ಕೆ ಸಜ್ಜು

Share
Share

ಹೊಸದುರ್ಗ: ರಂಗಭೂಮಿ, ವಿಚಾರ, ವಚನ ಸಂಗೀತ, ನೃತ್ಯ ಹಾಗೂ ಸಾಮಾಜಿಕ ಜಾಗೃತಿಯ ಸಂಗಮಕ್ಕೆ ಸಾಣೇಹಳ್ಳಿ ಮತ್ತೊಮ್ಮೆ ಸಜ್ಜಾಗುತ್ತಿದೆ. ನವೆಂಬರ್‌ 1ರಿಂದ 6ರವರೆಗೆ ಆರು ದಿನಗಳ ಕಾಲ ‘ರಾಷ್ಟ್ರೀಯ ನಾಟಕೋತ್ಸವ–26’ ಆಯೋಜಿಸಲಾಗುವುದು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಸೋಮವಾರ ನಡೆದ ನಾಟಕೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಟಕ ಕೇವಲ ಮನರಂಜನೆಯ ಮಾಧ್ಯಮವಲ್ಲ; ಸಮಾಜದೊಂದಿಗೆ ಸಂವಾದ ನಡೆಸುವ ಪ್ರಬಲ ಸಾಧನ ಎಂಬ ಆಶಯದಲ್ಲಿ ನಾಟಕೋತ್ಸವ ರೂಪಿಸಲಾಗಿದೆ ಎಂದರು.

ಶಿವಕುಮಾರ ಬಯಲು ರಂಗಮಂದಿರದಲ್ಲಿ ಪ್ರದರ್ಶನ

ಶಿವಕುಮಾರ ಬಯಲು ರಂಗಮಂದಿರದಲ್ಲಿ ನಾಟಕೋತ್ಸವದ ಮುಖ್ಯ ವೇದಿಕೆ ಕಾರ್ಯಕ್ರಮಗಳು ಹಾಗೂ ನಾಟಕಗಳ ಪ್ರದರ್ಶನ ನಡೆಯಲಿವೆ. ಶಿವಕುಮಾರ ರಂಗಮಂದಿರದಲ್ಲಿ ಪ್ರತಿದಿನ ಬೆಳಿಗ್ಗೆ ಪ್ರಾರ್ಥನಾ ಕಾರ್ಯಕ್ರಮಗಳು ಜರುಗಲಿವೆ.

ನಾಟಕೋತ್ಸವದಲ್ಲಿ ಶಿವಸಂಚಾರದ ಮೂರು ನಾಟಕಗಳು ಹಾಗೂ ಹೊರಗಿನಿಂದ ಆಗಮಿಸುವ ಮೂರು ನಾಟಕಗಳು ಸೇರಿದಂತೆ ಒಟ್ಟು ಆರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ಪ್ರತಿದಿನ ವಿಚಾರಮಾಲಿಕೆ, ವಚನ ಸಂಗೀತ, ನೃತ್ಯರೂಪಕ, ಸಾಧಕರಿಗೆ ಅಭಿನಂದನೆ, ರಾಜಕೀಯ ಮುಖಂಡರು, ವಿದ್ವಾಂಸರು ಹಾಗೂ ಚಿಂತಕರ ಮಾತುಗಳು, ಸ್ವಾಮೀಜಿಗಳ ಆಶೀರ್ವಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

‘ಶಿವಕುಮಾರ ಪ್ರಶಸ್ತಿ’ ಪ್ರದಾನ ಹಾಗೂ ‘ಗುರುಭವನ’ ಉದ್ಘಾಟನೆಯೂ ನಾಟಕೋತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.

ಹಿರಿಯ ಗುರುಗಳ ಕಾಲದಿಂದಲೂ ಮಠವು ಕಾಲ, ಕಾಸು ಮತ್ತು ಕಾಯಕಕ್ಕೆ ಮಹತ್ವ ನೀಡುತ್ತಾ ಬಂದಿದೆ. ಭಕ್ತರಿಗೆ ಕೊಡುವುದನ್ನು ಹಾಗೂ ದುಡಿಯುವುದನ್ನು ಗುರುಗಳು ಕಲಿಸಿಕೊಟ್ಟಿದ್ದಾರೆ. ಅದರ ಫಲವಾಗಿ ಇಂದು ಮಠದ ಯಾವುದೇ ಕಾರ್ಯಕ್ಕೂ ಭಕ್ತರು ಒತ್ತಡವಿಲ್ಲದೆ ಸ್ವಯಂಪ್ರೇರಣೆಯಿಂದ ಸಹಕಾರ ನೀಡುತ್ತಿದ್ದಾರೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ಕಬ್ಬಿನಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಮತ್ತು ವಿವಿಧ ಗ್ರಾಮಗಳ ದಾಸೋಹಿಗಳು ಈಗಾಗಲೇ ನಾಟಕೋತ್ಸವದ ಅನ್ನದಾನದ ವೆಚ್ಚವನ್ನು ವಹಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಬರಗಾಲದ ಹಿನ್ನೆಲೆ: ಜಾಗೃತಿ ನಾಟಕಕ್ಕೆ ಮನವಿ

ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್ ಮಾತನಾಡಿ, ಈ ಬಾರಿ ಎದುರಾಗಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ನಾಟಕೋತ್ಸವದ ಒಂದು ದಿನವಾದರೂ ನೀರಿನ ಸಂರಕ್ಷಣೆ, ಮಳೆನೀರು ಕೊಯ್ಲು ಹಾಗೂ ಬರವನ್ನು ಧೈರ್ಯದಿಂದ ಎದುರಿಸುವ ಕುರಿತು ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ನಾಟಕವನ್ನು ಆಯ್ಕೆ ಮಾಡಿ ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ‘ನಮ್ಮ ಮಠದ ಭಕ್ತರ ಭಾವನೆಗೆ ಎಂದೂ ಬರಗಾಲವಿಲ್ಲ. ಬರದ ನಡುವೆಯೂ ಸಾರ್ವಜನಿಕರು ಮತ್ತು ರೈತರಿಗೆ ಮಾನಸಿಕ ನೆಮ್ಮದಿ ಹಾಗೂ ಜಾಗೃತಿ ನೀಡುವ ನಿಟ್ಟಿನಲ್ಲಿ ನಾಟಕೋತ್ಸವ ಯಶಸ್ವಿಯಾಗಲಿ’ ಎಂದು ಆಶಿಸಿದರು.

ಕಲಾಸಂಘದ ಕಾರ್ಯದರ್ಶಿ ಎಸ್.ಕೆ. ಪರಮೇಶ್ವರಯ್ಯ, ಮುಖಂಡರಾದ ಸಿದ್ಧಪ್ಪ, ಅಜ್ಜಂಪುರದ ಎ.ಸಿ. ಚಂದ್ರಣ್ಣ, ಢಣಾಯಕಪುರದ ಗಂಗಾಧರಪ್ಪ, ಸಿದ್ದು ಯಾಪಲಪರವಿ, ಜಾನಕಲ್ ತಿಮ್ಮಜ್ಜ, ಕೆ.ಸಿ. ಶಿವಮೂರ್ತಿ, ಹೆಬ್ಬಳ್ಳಿ ಮಲ್ಲಿಕಾರ್ಜುನ, ಧ್ರುವಕುಮಾರ್ ಸೇರಿದಂತೆ ಶಾಲಾ-ಕಾಲೇಜುಗಳ ಮುಖ್ಯಸ್ಥರು, ನೌಕರರು, ಸಾಣೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Author

  • Prashanth Kumar N

    ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

    ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ.

    ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Share
Written by
Prashanth Kumar N - Editor

ಪ್ರಶಾಂತ್ ಕುಮಾರ್ ಎನ್. ಅವರು ChitradurgaLive.comನ ಸಂಪಾದಕರಾಗಿದ್ದು, ಕನ್ನಡ ಪತ್ರಿಕೋದ್ಯಮ ಕ್ಷೇತ್ರದಲ್ಲಿ 10 ವರ್ಷಗಳ ಅನುಭವ ಹೊಂದಿದ್ದಾರೆ. ಸ್ಥಳೀಯ ಸುದ್ದಿ, ರಾಜಕೀಯ, ಸಮಾಜ, ಶಿಕ್ಷಣ, ಕೃಷಿ ಮತ್ತು ಸಾರ್ವಜನಿಕ ಸಮಸ್ಯೆಗಳ ಕುರಿತು ನಿಖರ ಹಾಗೂ ಜನಪರ ವರದಿಗಾರಿಕೆಯಲ್ಲಿ ಅನುಭವ ಹೊಂದಿರುವ ಅವರು, ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳವಣಿಗೆಗಳನ್ನು ಓದುಗರಿಗೆ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ತಲುಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮ, SEO, ವೆಬ್ ಕಂಟೆಂಟ್, ಸಾಮಾಜಿಕ ಮಾಧ್ಯಮ ಮತ್ತು Artificial Intelligence (AI) ತಂತ್ರಜ್ಞಾನಗಳ ಕುರಿತು ವಿಶೇಷ ಜ್ಞಾನ ಹೊಂದಿರುವ ಅವರು, ಆಧುನಿಕ ತಂತ್ರಜ್ಞಾನವನ್ನು ಪತ್ರಿಕೋದ್ಯಮದೊಂದಿಗೆ ಸಂಯೋಜಿಸುವ ಮೂಲಕ ಗುಣಮಟ್ಟದ ಡಿಜಿಟಲ್ ಸುದ್ದಿಸೇವೆಯನ್ನು ರೂಪಿಸುವತ್ತ ಗಮನಹರಿಸಿದ್ದಾರೆ. ChitradurgaLive.com ಮೂಲಕ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡಿ, ಜನರ ಧ್ವನಿಯನ್ನು ಜನರಿಗೆ ತಲುಪಿಸುವುದು ಹಾಗೂ ನಿಖರ, ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಪತ್ರಿಕೋದ್ಯಮವನ್ನು ಬೆಳೆಸುವುದು ಅವರ ಪ್ರಮುಖ ಉದ್ದೇಶವಾಗಿದೆ.

Loading News...

More News

Related Articles

ಬರ ಪರಿಹಾರ, ರಾಗಿ ಹಣ ಬಿಡುಗಡೆಗೆ ಆಗ್ರಹ: ಹೊಸದುರ್ಗದಲ್ಲಿ ರೈತರ ಬೃಹತ್ ರಸ್ತೆ ತಡೆ ಪ್ರತಿಭಟನೆ

ಹೊಸದುರ್ಗ: ತಾಲ್ಲೂಕಿನಲ್ಲಿ ಆವರಿಸಿರುವ ಭೀಕರ ಬರಗಾಲಕ್ಕೆ ತಕ್ಷಣವೇ ಪರಿಹಾರ ಕಲ್ಪಿಸಬೇಕು ಹಾಗೂ ಬೆಂಬಲ ಬೆಲೆಯಡಿ ಖರೀದಿಸಿದ...

ಹೊಸದುರ್ಗ ಮೂಲದ ದಕ್ಷ ಅಧಿಕಾರಿ ಟಿ. ಯೋಗೇಶ್‌ಗೆ ಪ್ರತಿಷ್ಠಿತ ‘ಸ್ಕೋಚ್ ಸ್ವರ್ಣ ಪ್ರಶಸ್ತಿ’

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನವರಾದ ಹಾಗೂ ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿರುವ ಹಿರಿಯ ಅಧಿಕಾರಿ ಟಿ. ಯೋಗೇಶ್...

ಸೆ. 24ರಂದು ಭದ್ರಾ ನಾಲೆಗೆ ಸಿಎಂ ಡಿಕೆ ಬಾಗಿನ | ಹೊಸದುರ್ಗದಿಂದ 100 ಬಸ್‌ಗಳ ವ್ಯವಸ್ಥೆ | ಶಾಸಕ ಬಿ.ಜಿ. ಗೋವಿಂದಪ್ಪ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್...

ಹೊಸದುರ್ಗ: ಭದ್ರಾ ಟ್ರಯಲ್ ರನ್ ವೇಳೆ ಕಾಲುವೆ ಒಡೆದ ಕಿಡಿಗೇಡಿಗಳು, ಅಪಾರ ನೀರು ಪೋಲು

ಹೊಸದುರ್ಗ: ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರು ಇನ್ನೇನು ನಮ್ಮ ಕೆರೆಗಳಿಗೆ ಹರಿದು ಬರಲಿದೆ...